11 ನೇ ಮಾರ್ಚ್, 2018-ಪ್ರಚಲಿತ ಘಟನೆಗಳು
(ಪುಟದ ಕೊನೆಯಲ್ಲಿ PDF ನ್ನು ಡೌನ್ ಲೋಡ್ ಮಾಡಿಕೊಳ್ಳಿ)
ರಾಜ್ಯ
1. ಫ್ರಾನ್ಸ್ ಕಂಪನಿ ಜೊತೆ ಒಪ್ಪಂದ:
* ಆನೇಕಲ್ ತಾಲ್ಲೂಕಿನ ಚಿಕ್ಕನಾಗಮಂಗಲ ಬಳಿ ಘನ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಘಟಕ ಸ್ಥಾಪಿಸುವ ನಿಟ್ಟಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯು ಫ್ರಾನ್ಸ್ ಮೂಲದ 3ವೇಸ್ಟ್ ಸ್ಯಾಸ್ ಕಂಪನಿ ಜತೆ ಒಪ್ಪಂದ ಮಾಡಿಕೊಂಡಿತು.
* ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಅವರೊಂದಿಗೆ ಭಾರತಕ್ಕೆ ಭೇಟಿ ನೀಡಿರುವ ಫ್ರಾನ್ಸ್ ನ ವಿದೇಶಾಂಗ ಸಚಿವ ಜೀನ್ ಯೆಸ್ ಲೀ ಡ್ರೇನ್ ಅವರ ಸಮ್ಮುಖದಲ್ಲಿ ಇಲ್ಲಿನ ಪಂಚತಾರಾ ಹೋಟೆಲ್ನಲ್ಲಿ ಸಂಜೆ ನಡೆದ ಕಾರ್ಯ ಕ್ರಮದಲ್ಲಿ, 3ವೇಸ್ಟ್ ಸ್ಯಾಸ್ ಕಂಪನಿ ಜೊತೆ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಹಾಗೂ ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಓ) ರಾಬರ್ಟ್ ಫಿಲಿಪ್ ಸಹಿ ಹಾಕಿದರು.
* ಒಪ್ಪಂದದ ಪ್ರಕಾರ ಅಂದಾಜು 2,500 ಕೋಟಿ ವೆಚ್ಚದ ಘಟಕವನ್ನು 3 ವೇಸ್ಟ್ ಸ್ಯಾಸ್ ಕಂಪನಿಯೇ ಸ್ಥಾಪಿಸಲಿದ್ದು, ಬಿಬಿಎಂಪಿ ಹಣಕಾಸಿನ ನೆರವು ನೀಡುವುದಿಲ್ಲ.
* ಆದರೆ ವಿದ್ಯುತ್ ಉತ್ಪಾದನೆಗಾಗಿ ನಿತ್ಯವೂ ಅಂದಾಜು 500 ಟನ್ ಘನ ತ್ಯಾಜ್ಯ ವನ್ನು ಕಂಪನಿಗೆ ಪೂರೈಸುವ ಹೊಣೆಗಾರಿಕೆ ಹೊಂದಲಿದೆ.
* ಅಲ್ಲದೆ, ವಿದ್ಯುತ್ ಉತ್ಪಾದಿಸುವ ಹಕ್ಕುಸ್ವಾಮ್ಯವನ್ನು ಕಂಪನಿಯೇ ಹೊಂದಲಿದೆ.
ರಾಷ್ಟ್ರೀಯ
1. ಮುಂಬೈ-ದೆಹಲಿ ಏರ್ಪೋರ್ಟ್ಗೆ ನಂ.1 ಪಟ್ಟ:
* ಜಗತ್ತಿನ ಅತ್ಯುತ್ತಮ ವಿಮಾಣ ನಿಲ್ದಾಣಗಳಿಗೆ ಸಂಬಂಧಿಸಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಮಂಡಳಿ (ಎಸಿಐ) ಏರ್ಪೋರ್ಟ್ ಸರ್ವೀಸ್ ಕ್ವಾಲಿಟಿ (ಎಎಸ್ಕ್ಯೂ) – 2017 ರ ಕ್ರಮಾಂಕದಲ್ಲಿ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಮುಂಬೈ ಛತ್ರಪತಿ ಶಿವಾಜಿ ಮಹಾರಾಜಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಮೊದಲ ಸ್ಥಾನ ಪಡೆದಿವೆ.
* ಇವೆರಡೂ 176 ದೇಶಗಳ 1952 ವಿಮಾನ ನಿಲ್ದಾಣಗಳನ್ನು ಹಿಂದಿಕ್ಕಿ ಮೊದಲ ಸ್ಥಾನ ಗಳಿಸಿವೆ.
* ವಿಮಾನ ನಿಲ್ದಾಣಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿ 34 ಪ್ರಮುಖ ಅಂಶಗಳಿಗೆ ಸಂಬಂಧಿಸಿ ಪ್ರಯಾಣಿಕರು ನೀಡಿದ ಪ್ರತಿಕ್ರಿಯೆ ಆಧಾರದಲ್ಲಿ ಈ ಕ್ರಮಾಂಕ ಪ್ರಕಟಿಸಲಾಗಿದೆ.
2. ಚೀನಾ ಗಡಿ ಸೈನಿಕರಿಗೆ ಪೂರ್ಣ ಪಿಂಚಣಿ:
* ಭಾರತ ಮತ್ತು ಚೀನಾದ ವಿವಾದಿತ ಗಡಿ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಮೃತಪಟ್ಟ ಅಥವಾ ಗಾಯಗೊಂಡ ಸೈನಿಕರ ಕುಟುಂಬಗಳಿಗೆ ಪೂರ್ಣ ಪಿಂಚಣಿ ನೀಡಲು ರಕ್ಷಣಾ ಇಲಾಖೆ ನಿರ್ಧರಿಸಿದೆ.
* ಕಳೆದವಾರ ಮಾಜಿ ಸೈನಿಕರ ಕಲ್ಯಾಣ ಇಲಾಖೆಯು ಭಾರತ ಮತ್ತು ಚೀನಾ ಗಡಿಯಲ್ಲಿ ಕಾರ್ಯನಿರ್ವಹಿಸುವ ಸೈನಿಕರ ಕುಟುಂಬಗಳಿಗೆ ಸಂಪೂರ್ಣ ಕೌಟುಂಬಿಕ ಪಿಂಚಣಿ ಆದೇಶ ಹೊರಡಿಸಿತ್ತು.
* ಈ ತನಕ ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಕಾರ್ಯನಿರ್ವಹಿಸುವ ಸೈನಿಕರಿಗೆ ಮಾತ್ರ ಈ ಸೌಲಭ್ಯ ದೊರಕುತ್ತಿತ್ತು.
ಆರ್ಥಿಕ
1. 50 ಕೋಟಿ ರೂ. ಮೀರಿದ ಬ್ಯಾಂಕ್ ಸಾಲಕ್ಕೆ ಪಾಸ್ಪೋರ್ಟ್ ಮಾಹಿತಿ ಕಡ್ಡಾಯ:
* 50 ಕೋಟಿ ರೂ. ಅಥವಾ ಅದಕ್ಕೂ ಮೀರಿದ ಹೆಚ್ಚಿನ ಸಾಲಕ್ಕೆ ಪಾಸ್ಪೋರ್ಟ್ ಮಾಹಿತಿಯನ್ನು ಕೇಂದ್ರ ಸರಕಾರ ಕಡ್ಡಾಯಗೊಳಿಸಿದೆ.
* ಬ್ಯಾಂಕ್ ವಂಚನೆ ಮತ್ತು ದೊಡ್ಡ ಮೊತ್ತದ ಸಾಲ ಮಾಡಿ ವಿದೇಶಕ್ಕೆ ಪಲಾಯನ ಮಾಡುವ ಪ್ರಕರಣಗಳು ಹೆಚ್ಚುತ್ತಿವೆ.
* ಇವುಗಳನ್ನು ನಿಗ್ರಹಿಸುವ ನಿಟ್ಟಿನಲ್ಲಿ ಸರಕಾರ ಈ ಕ್ರಮ ಕೈಗೊಂಡಿದೆ.
* ಹೊಸ ನಿಯಮದ ಅನ್ವಯ ಮುಂದಿನ 45 ದಿನಗಳಲ್ಲಿ ಎಲ್ಲ ಬ್ಯಾಂಕ್ ಗಳು ಇಂಥ ಸಾಲಗಳಿಗೆ ಸಂಬಂಧಿಸಿದಂತೆ ಸಾಲಗಾರರಿಂದ ಪಾಸ್ಪೋರ್ಟ್ ವಿವರಗಳನ್ನು ಸಂಗ್ರಹಿಸಬೇಕಾಗಿದೆ.
* ಪಾಸ್ ಪೋರ್ಟ್ ಮಾಹಿತಿಯು ಬ್ಯಾಂಕ್ನವರ ಬಳಿಯಿದ್ದರೆ ವಿದೇಶಗಳಿಗೆ ಓಡುವ ಸುಸ್ತಿದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ.
* ಅಲ್ಲದೇ, ಸಂಬಂಧ ಪಟ್ಟ ಇಲಾಖೆಗೆ ಮಾಹಿತಿ ನೀಡಲೂ ಅನುಕೂಲವಾಗಲಿದೆ.
* ಪಾಸ್ಪೋರ್ಟ್ ಮಾಹಿತಿಗಳು ಇಲ್ಲದೇ ಹೋದರೆ, ಸಕಾಲದಲ್ಲಿ ಸುಸ್ತಿದಾರರ ವಿರುದ್ಧ ಕ್ರಮ ಜರುಗಿಸಲು ತೊಡಕಾಗುತ್ತದೆ.
* “ಜವಾಬ್ದಾರಿಯುತ ಬ್ಯಾಂಕಿಂಗ್ ವಲಯವನ್ನು ನಿರ್ಮಾಣ ಮಾಡಲು ಮತ್ತು ಆರ್ಥಿಕ ಅಪರಾಧಗಳನ್ನು ನಿಗ್ರಹಿಸುವ ನಿಟ್ಟಿನಲ್ಲಿ ಪಾಸ್ಪೋರ್ಟ್ ಮಾಹಿತಿಯನ್ನು ಕಡ್ಡಾಯಗೊಳಿಸಲಾಗುತ್ತಿದೆ,” ಎಂದು ಹಣಕಾಸು ಸೇವೆಗಳ ಕಾರ್ಯದರ್ಶಿ ರಾಜೀವ್ ಕುಮಾರ್ ಟ್ವೀಟ್ ಮಾಡಿದ್ದಾರೆ.
* ವಿಜಯ್ ಮಲ್ಯ, ಜತಿನ್ ಮೆಹ್ತ ಮತ್ತಿತರ ಬೃಹತ್ ಸಾಲಗಳ ಸುಸ್ತಿದಾರರು ವಿದೇಶಗಳಿಗೆ ಪಲಾಯನ ಮಾಡಿದ್ದಾರೆ.
* ನೀರವ್ ಮೋದಿ ಮತ್ತು ಅವರ ಚಿಕ್ಕಪ್ಪ ಮೆಹುಲ್ ಚೋಕ್ಸಿ ಅವರು ಭಾಗಿಯಾಗಿರುವ 12,700 ಕೋಟಿ ರೂ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ ಬೆಳಕಿಗೆ ಬಂದ ಬಳಿಕ ‘ದೇಶ ತೊರೆದ ಆರ್ಥಿಕ ಅಪರಾಧಿಗಳ ವಿಧೇಯಕ-2018’ ಅನ್ನು ಸರಕಾರ ರೂಪಿಸಿದೆ.
* ಆರ್ಥಿಕ ಅಪರಾಧಿಗಳ ವಿರುದ್ದ ಕ್ರ ಕೈಗೊಳ್ಳಲು ಈ ವಿಧೇಯಕ ಪೂರಕವಾಗಲಿದೆ.
* ದೇಶ ತೊರೆದ ಸುಸ್ತಿದಾರ ಉದ್ಯಮಿಗಳು ತಮ್ಮ ಆಸ್ತಿಯನ್ನು ಮಾರಾಟ ಮಾಡಲು ಈ ವಿಧೇಯಕ ತೊಡಕು ತರಲಿದೆ.
* ಆರ್ಥಿಕ ಅಪರಾಧಿಗಳ ಬೇನಾಮಿ ಸೇರಿದಂತೆ ಎಲ್ಲ ಆಸ್ತಿಗಳನ್ನು ವಶಪಡಿಸಿಕೊಳ್ಳುವುದಕ್ಕೆ ವಿಧೇಯಕ ಪೂರಕವಾಗಲಿದೆ.
* ವಿದೇಶಕ್ಕೆ ಪಲಾಯನ ಮಾಡಿದ ಉದ್ಯಮಿಗಳು ಆ ದೇಶದಲ್ಲಿ ಹೊಂದಿರುವ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಾಗಲಿದೆ.
* ಆದರೆ, ಅದಕ್ಕೆ ಮೊದಲು ಆಯಾ ದೇಶಗಳ ಜತೆ ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ ಎಂದು ವಿಧೇಯಕದ ಬಗ್ಗೆ ವಿತ್ತ ಸಚಿವ ಅರುಣ್ ಜೇಟ್ಲಿ ವಿವರಿಸಿದ್ದರು.
2. ರೊಟೊಮ್ಯಾಕ್ ಕಂಪನಿ ಸ್ಥಗಿತ?
* ರೊಟೊಮ್ಯಾಕ್ ಸಮೂಹದ ಎರಡು ಕಂಪನಿಗಳ ವಿರುದ್ದ ಬ್ಯಾಂಕ್ಗಳು ಸುಸ್ತಿ ಸಾಲಕ್ಕೆ ಸಂಬಂಧಿಸಿ ಕಠಿಣ ಕ್ರಮ ಜರುಗಿಸಲು ನಿರ್ಧರಿಸಿದ್ದು, ಈ ಕಂಪನಿಗಳು ಸ್ಥಗಿತವಾಗುವ ಸಾಧ್ಯತೆ ಇದೆ.
* ಈ ಕಂಪನಿಗಳು ಸುಮಾರು 4,000 ಕೋಟಿ ರೂ. ಸಾಲ ಹೊಂದಿದ್ದು, ಸುಸ್ತಿ ಸಾಲವನ್ನು ಪುನಾರಚನೆಗೊಳಿಸಲು ಮನವಿ ಸಲ್ಲಿಸಿದ್ದವು.
* ಆದರೆ ಸಾಲದ ಪುನಾರಚನೆಗೆ ಬ್ಯಾಂಕ್ಗಳು ನಿರಾಕರಿಸಿದ್ದು, ಕಂಪನಿಗಳು ಬಾಗಿಲು ಮುಚ್ಚುವ ಸ್ಥಿತಿಗೆ ತಲುಪಿವೆ.
* ರೊಟೊಮ್ಯಾಕ್ ಎಕ್ಸ್ ಪೋರ್ಟ್ಸ್ ಮತ್ತು ರೊಟೊಮ್ಯಾಕ್ ಗ್ಲೋಬಲ್ ಕಂಪನಿಗಳು ದಿವಾಳಿಯಾಗಿದ್ದು, ಅವುಗಳ ಹರಾಜು ನಡೆಯಲಿವೆ.
* ಬ್ಯಾಂಕ್ಗಳಿಗೆ ವಂಚಿಸಿರುವ ಆರೋಪ ಎದುರಿಸುತ್ತಿರುವ ಉದ್ಯಮಿ ವಿಕ್ರಮ್ ಕೊಠಾರಿ ಈ ಕಂಪನಿಗಳ ಮಾಲೀಕ ಆರಂಭದಲ್ಲಿ ಬ್ಯಾಂಕ್ಗಳು 180 ದಿನಗಳ ಗಡುವನ್ನು ನೀಡಿದ್ದವು. ಇದು ಮಾರ್ಚ್ 19ಕ್ಕೆ ಮುಕ್ತಾಯವಾಗುತ್ತಿವೆ.
* ಆದರೆ ಈ ಅವಧಿಯನ್ನು ಮತ್ತೆ 90 ದಿನಗಳಿಗೆ ವಿಸ್ತರಿಸದಿರಲು ಬ್ಯಾಂಕ್ಗಳು ನಿರ್ಧರಿಸಿವೆ.
* ಇತ್ತೀಚೆಗೆ ಸಿಬಿಐ ರೊಟೊಮ್ಯಾಕ್ ಮಾಲೀಕ ವಿಕ್ರಮ್ ಕೊಠಾರಿ ಮತ್ತು ಅವರ ಮಗ ರಾಹುಲ್ ಕೊಠಾರಿ ಅವರನ್ನು ಬಂಧಿಸಿತ್ತು.
* ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ, ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಅಲಹಾಬಾದ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಮಹಾರಾಷ್ಟ್ರ ಈ ಕಂಪನಿಗೆ 4,000 ಕೋಟಿ ರೂ. ಸಾಲ ಕೊಟ್ಟಿವೆ.
3. ಪಿಂಚಣಿ ವಲಯಕ್ಕೆ ಎಫ್ಡಿಐ ನಿಯಮ ಸಡಿಲ:
* ಪಿಂಚಣಿ ವಲಯಕ್ಕೆ ವಿದೇಶಿ ನೇರ ಬಂಡವಾಳ ಹೂಡಿಕೆಯ ನಿಯಮಾವಳಿಗಳನ್ನು ಸಡಿಲಗೊಳಿಸಲು ಸರಕಾರ ಪರಿಶೀಲನೆ ನಡೆಸಿದೆ.
* ವಿಮೆ ವಲಯಕ್ಕೆ ವಿದೇಶಿ ಹೂಡಿಕೆ ನೀತಿಯನ್ನು ಈ ಹಿಂದೆ ಸಡಿಲಗೊಳಿಸಿದ ಮಾದರಿಯಲ್ಲಿಯೇ, ಪಿಂಚಣಿ ವಲಯಕ್ಕೂ ಅನ್ವಯಗೊಳಿಸಲು ಸರಕಾರ ಚಿಂತನೆ ಮಾಡಿದೆ.
* ಇದರಿಂದ ಎಚ್ಡಿಎಫ್ಸಿ ಪೆನ್ಷನ್ ಮ್ಯಾನೇಜ್ಮೆಂಟ್, ಐಸಿಐಸಿಐ ಪ್ರುಡೆನ್ಶಿಯಲ್ ಪೆನ್ಷನ್ ಫಂಡ್ ಮ್ಯಾನೇಜ್ಮೆಂಟ್ ಇತ್ಯಾದಿ ಕಂಪನಿಗಳಿಗೆ ಹೆಚ್ಚಿನ ಎಫ್ಡಿಐ ಪಡೆಯಲು ಅನುಕೂಲವಾಗಲಿದೆ.
* ಜನತೆಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಪಿಂಚಣಿ ಉತ್ಪನ್ನಗಳು ದೊರೆಯಲು ಸಹಕಾರಿಯಾಗಲಿದೆ.
* ಈ ಸಂಬಂಧ ಹಣಕಾಸು ಸಚಿವಾಲಯ ಹಾಗೂ ಕೈಗಾರಿಕಾ ನೀತಿ ಮತ್ತು ಅಭಿವೃದ್ಧಿ ಮಂಡಳಿ ಜತೆ ಸಮಾಲೋಚನೆ ನಡೆಯುತ್ತಿದೆ.
* ಸರಕಾರ 2015ರಲ್ಲಿ ವಿಮೆ ವಲಯದಲ್ಲಿ 26ರಿಂದ 49 ಪರ್ಸೆಂಟ್ ಎಫ್ಡಿಐಗೆ ಅನುಮತಿ ನೀಡಿತ್ತು.
4. ಏರ್ಟೆಲ್ ಪೇಮೆಂಟ್ ಬ್ಯಾಂಕ್ಗೆ 5 ಕೋಟಿ ದಂಡ:
* ಕಾರ್ಯಾಚರಣೆ ಮಾರ್ಗ ಸೂಚಿಗಳು ಮತ್ತು ಕೆವೈಸಿ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಏರ್ಟೆಲ್ ಪೇಮೆಂಟ್ ಬ್ಯಾಂಕ್ಗೆ ಆರ್ಬಿಐ 5 ಕೋಟಿ ರೂ. ದಂಡ ವಿಧಿಸಿದೆ.
* ಏರ್ಟೆಲ್ ಪೇಮೆಂಟ್ ಬ್ಯಾಂಕ್ನಲ್ಲಿ ಗ್ರಾಹಕರ ಒಪ್ಪಿಗೆ ಇಲ್ಲದೇ ಖಾತೆ ತೆರೆಯಲಾಗಿದೆ.
* ಗ್ರಾಹಕರ ಕೆವೈಸಿ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎನ್ನುವ ದೂರುಗಳ ಬಗ್ಗೆ ಆರ್ಬಿಐ ವಿಚಾರಣೆ ನಡೆಸಿ ದಂಡ ಹಾಕಿದೆ.
* ಕಳೆದ ವರ್ಷದ ಜನವರಿಯಲ್ಲಷ್ಟೇ ಏರ್ ಟೆಲ್ ಪೇಮೆಂಟ್ ಬ್ಯಾಂಕ್ ಕಾರ್ಯಾಚರಣೆಯನ್ನು ಆರಂಭಿಸಿತ್ತು.
* ಈ ಬ್ಯಾಂಕ್ 23 ಲಕ್ಷ ಗ್ರಾಹಕರನ್ನು ಹೊಂದಿದೆ. ಆದರೆ, ಗ್ರಾಹಕರ ಸಮ್ಮತಿಯನ್ನು ಪಡೆದಿಲ್ಲ.
* ಎಷ್ಟೋ ಗ್ರಾಹಕರಿಗೆ ತಮ್ಮ ಖಾತೆಯ ಬಗ್ಗೆಯೇ ಅರಿವಿಲ್ಲ. ಕೆವೈಸಿ ದಾಖಲೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಮಾಧ್ಯಮ ವರದಿಗಳಲ್ಲಿ ದೂರಲಾಗಿತ್ತು.
* ಈ ಬಗ್ಗೆ ಖುದ್ದು ವಿಚಾರಣೆ ನಡೆಸಿದ ಆರ್ಬಿಐ, ನಿಯಮಗಳ ಉಲ್ಲಂಘನೆಯನ್ನು ದೃಢೀಕರಿಸಿ ದಂಡ ವಿಧಿಸಿದೆ.
ಕ್ರೀಡೆ
1. ಫೆನ್ನಿಂಗ್ಸ್: ತ್ಯಾಗರಾಜ್ ಗೆ ಚಿನ್ನ:
* ಕರ್ನಾಟಕದ ತ್ಯಾಗರಾಜ್ ಮಣಿಪುರದ ಇಂಪಾಲದಲ್ಲಿ ನಡೆಯುತ್ತಿರುವ 11ನೇ ರಾಷ್ಟ್ರೀಯ ವೀಲ್ ಚೇರ್ ಫೆನ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ಚಿನ್ನದ ಪದಕ ಗೆದ್ದರು.
* ಇದರೊಂದಿಗೆ ಸ್ಪರ್ಧಿಸಿದ ಮೂರೂ ವಿಭಾಗಗಳಲ್ಲಿ ಪದಕ ಗೆದ್ದ ಸಾಧನೆ ಮಾಡಿದರು.
* ‘ಬಿ’ ಕೆಟಗರಿ ಫಾಯಿಲ್ ವೈಯಕ್ತಿಕ ವಿಭಾಗದ ಫೈನಲ್ನಲ್ಲಿ ತ್ಯಾಗರಾಜ ಅವರು ಹರಿಯಾಣದ ಸ್ಪರ್ಧಿ ದೇವೇಂದರ್ ಎದುರು ಗೆದ್ದರು.
* ಸೆಬರ್ ವಿಭಾಗದಲ್ಲಿ ಮಣಿಪುರದ ಎಂ.ಡಿ ರಿಯಾಜ್ ಎದುರು ಸೋತು ಬೆಳ್ಳಿ ಪಡೆದರು.
* ಇಪೀ ವಿಭಾಗದಲ್ಲಿ ಕೂಡ ಅವರು ಕಂಚಿನ ಪದಕ ಗೆದ್ದರು.
2. ಚಿನ್ನ ಗೆದ್ದ ಕಾಡಿನ ಹುಡುಗ:
* ದ್ರೋಣಾಚಾರ್ಯರ ಶಿಷ್ಯನಾಗುವ ಅವಕಾಶ ಏಕಲವ್ಯನಿಗೆ ಸಿಗದಿದ್ದರೂ ಅವರ ಪ್ರತಿಮೆಯನ್ನಿಟ್ಟುಕೊಂಡೇ ಕಾಡಿನಲ್ಲಿ ಬಿಲ್ಗಾರಿಕೆ ಅಭ್ಯಾಸ ನಡೆಸಿ ವಿಶ್ವ ಗೆದ್ದ ಮಹಾಭಾರತದ ಕಥೆ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ.
* ಹೆಚ್ಚುಕಡಿಮೆ ಇದಕ್ಕೆ ಹೋಲುವಂತಹ ನೈಜ ಘಟನೆಯೊಂದರ ನಾಯಕ ಜಾರ್ಖಂಡ್ನ 17 ವರ್ಷದ ಹುಡುಗ ಗೋರಾ.
* ಏಕಲವ್ಯ ಮತ್ತು ಗೋರಾ ಇಬ್ಬರೂ ಕಾಡಿನಲ್ಲಿ ಅರಳಿದ ಪ್ರತಿಭೆಗಳು ಎನ್ನುವುದು ಇಲ್ಲಿನ ವಿಶೇಷ.
* ಬ್ಯಾಂಕಾಕ್ನಲ್ಲಿ ನಡೆದ ಏಷ್ಯಾಕಪ್ ಹಂತ 1 ಬಿಲ್ಗಾರಿಕೆ ಕೂಟದ ತಂಡ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ ಗೋರಾ, ತನಗಷ್ಟೇ ಅಲ್ಲ ಇಡೀ ಬುಡಕಟ್ಟು ಜನರು ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾರೆ.
* ಇವರೊಂದಿಗೆ ತಂಡದಲ್ಲಿ ಆಕಾಶ್, ಗೌರವ್ ಲಾಂಬೆ ಕೂಡ ಇದ್ದರು.
* ಇವರನ್ನೊಳಗೊಂಡ ತಂಡ ಮಂಗೋಲಿಯಾ ವಿರುದ್ದ ಫೈನಲ್ನ ರಿಕರ್ವ್ ವಿಭಾಗದಲ್ಲಿ ಗೆಲುವು ಗಳಿಸಿ ಈ ಸಾಧನೆ ಮಾಡಿದೆ.
ಜಾರ್ಖಂಡ್ನ ಬುಡಕಟ್ಟು ಜನಾಂಗದ ಗೋರಾಗೆ ಸ್ವರ್ಣ ಸಂಭ್ರಮ:
* ಜಾರ್ಖಂಡ್ನ ಕೃಷಿ ಕುಟುಂಬದಲ್ಲಿ ಹುಟ್ಟಿದ ಪ್ರತಿಭೆ ಗೋರಾ, ಕಾಡಿನಲ್ಲೇ ಬೆಳೆಯುವುದರ ಜೊತೆಗೆ ಬಿಲ್ಗಾರಿಕೆಯನ್ನು ಸಹಜವಾಗಿ ಕಲಿತರು (ಜಾರ್ಖಂಡ್ನಲ್ಲಿ ಬಿಲ್ಗಾರಿಕೆ ಅತ್ಯಂತ ಜನಪ್ರಿಯ ಕ್ರೀಡೆ).
* ಆಗ ಅವರಿಗೆ ಗುರುವಿನ ಮಾರ್ಗದರ್ಶನವೇ ಇರಲಿಲ್ಲ.
* 2014ರಲ್ಲಿ ಇವರನ್ನು ಗುರುತಿಸಿದ ಗುರು ಶ್ರೀನಿವಾಸ ರಾವ್ ಎನ್ನುವ ಬಿಲ್ಗಾರಿಕೆ ಗುರು ಸೆರಾಯ್ ಕೆಲಾದ ದುಗ್ನಿ ಅಕಾಡೆಮಿಗೆ ಸೇರಿಸಿದರು.
* ಬರೀ 13ನೇ ವಯಸ್ಸಿನಲ್ಲೇ ರಾಷ್ಟ್ರೀಯ ಶಾಲಾ ಕೂಟದಲ್ಲಿ 3 ಚಿನ್ನ ಗೆದ್ದರು.
* ಅದೇ ವರ್ಷ ಜಾರ್ಖಂಡ್ ರಾಜ್ಯ ಬಿಲ್ಗಾರಿಕೆ 10 ಪದಕ ಗೆದ್ದರು.
* ಗೋರಾ ಪ್ರತಿಭೆಯ ಪರಿಚಯ ಪಡೆದ ಜಾರ್ಖಂಡ್ ಸರ್ಕಾರ ವಿಶೇಷವಾದ ಬಿಲ್ಲು ಹಾಗೂ 2.70 ಲಕ್ಷ ರೂ. ನಗದು ನೀಡಿ ಗೌರವಿಸಿತು.