22 ನೇ ಆಗಸ್ಟ್, 2018-ಪ್ರಚಲಿತ ಘಟನೆಗಳು
(ಪುಟದ ಕೊನೆಯಲ್ಲಿ PDF ನ್ನು ಡೌನ್ ಲೋಡ್ ಮಾಡಿಕೊಳ್ಳಿ)
ರಾಜ್ಯ
1. ರಾಜ್ಯದ ಸರಕು ಸಾಗಾಣೆ ಕರಡು ನೀತಿ ಪ್ರಕಟ
- ವಿಶ್ವೇಶ್ವರಯ್ಯ ವಾಣಿಜ್ಯ ಉತ್ತೇಜನ ಮಂಡಳಿ ಭಾರತೀಯ ಕೈಗಾರಿಕಾ ಒಕ್ಕೂಟ ಮತ್ತು ಯೆಸ್ ಬ್ಯಾಂಕ್ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಬೃಹತ್ ಕೈಗಾರಿಕಾ ಸಚಿವ ಕೆ.ಜೆ ಜಾರ್ಜ್ ರವರು ಈ ಕರಡು ನೀತಿ ಪ್ರಕಟಿಸಿರು.
ರಾಷ್ಟ್ರೀಯ
1. ಬಾಂಬೆ ಐಐಟಿ ವರದಿ ಅವೈಜ್ಞಾನಿಕ ನಗರೀಕರಣದಿಂದ ಪ್ರವಾಹ
- ಕೊಡಗು ಸೇರಿದಂತೆ ದಕ್ಷಿಣ ಒಳನಾಡು ಹಾಗೂ ಕೇರಳದಲ್ಲಿ ಪ್ರವಾಹ ಉಂಟಾಗಲು ನಗರೀಕರಣವೇ ಪ್ರಮುಖ ಕಾರಣ.
- ಕ್ಷಿಪ್ರಗತಿಯ ನಗರೀಕರಣಕ್ಕೆ ದಕ್ಷಿಣ ಕನ್ನಡದಲ್ಲಿ ನೇತ್ರಾವತಿ ಕಣಿವೆಯಲ್ಲಿ ಅಪಾರ ಪ್ರಮಾಣದ ಅರಣ್ಯ ನಾಶವಾಗಿದೆ. ಅಲ್ಲದೇ ಕಾಂಕ್ರಿಟ್ ಕಾಡು ಹೆಚ್ಚಾಗಿದೆ.
- ನೇತ್ರಾವತಿ ಕಣಿವೆಯಲ್ಲಿ 1972 ರಿಂದ 2012 ವರೆಗೆ 4 ಪಟ್ಟು ಹೆಚ್ಚು ನಗರೀಕರಣವಾಗಿದೆ. 2030ರ ವೇಳೆಗೆ ಇದು 240 ಚ.ಕಿ.ಮೀ ನಿಂದ 340 ಚ.ಕಿ.ಮೀ ವರೆಗೆ ವಿಸ್ತರಣೆಯಾಗಲಿದೆ.
- ನೇತ್ರಾವತಿ ಕಣಿವೆಯಲ್ಲಿ ಅಂದಾಜು 12 ಲಕ್ಷ ಜನರು ವಾಸಿಸುತ್ತಿದ್ದು ಎರಡು ಪಟ್ಟು ಏರಿಕೆಯಾಗಲಿದೆ ಈ ಅವಧಿಯಲ್ಲಿ ಕೃಷಿ ಪ್ರದೇಶ ಕೂಡ ಶೇ 15 ರಷ್ಟು ಹೆಚ್ಚಾಗಿದ್ದು 2030 ರ ವೇಳೆಗೆ ಇದು ಶೇ24 ರಷ್ಟು ಹೆಚ್ಚಳವಾಗಲಿದೆ.
- ಅರಣ್ಯ ಪ್ರದೇಶ ಕೂಡ ಶೇ 18 ರಷ್ಟು ಕಡಿಮೆಯಾಗಿದ್ದು ಇನ್ನು 12 ವರ್ಷಗಳಲ್ಲಿ ಶೇ 26 ರಷ್ಟು ಅರಣ್ಯ ಕಡಿಮೆಯಾಗಲಿದೆ.
- ನದಿ ಮುಖಜ ಭೂವಿಯಲ್ಲಿ ಅವೈಜ್ಞಾನಿಕ ಅಭಿವೃದ್ದಿ ಕೆಲಸಗಳಾಗಿರುವ ಕಡೆಗಳಲ್ಲಿ ಪ್ರವಾಹ ಉಂಟಾಗಿದೆ.
- ಪೆರಿಯಾರ್ ನದಿಯ ಎರಡೂ ದಂಡೆಗಳಲ್ಲಿ ಅಡ್ಡಾದಿಡ್ಡಿಯಾಗಿ ನಗರ ಬೆಳವಣಿಗೆಯಾಗಿರುವುದರಿಂದ ಪ್ರವಾಹ ಮಿತಿಮೀರಿದೆ.
2. ಪಂಡಿತ್ ಬಸವರಾಜ ರಾಜಗುರು ರಾಷ್ಟೀಯ ಸ್ಮಾರಕ ಟ್ರಸ್ಟ್ ನ ರಾಷ್ಟ್ರೀಯ ಪ್ರಶಸ್ತಿ
2017-18 ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿಗೆ ಹಿರಿಯ ವಯಲಿನ್ ವಾದಕಿ (ಹಿಂದೂಸ್ತಾನಿ ಸಂಗೀತ ವಾದ್ಯ) ವಿದುಷಿ ಎನ್.ರಾಜಂ ಭಾಜನವಾಗಿದ್ದಾರೆ.
ನಾಂದೇಡದ ಧನಂಜಯ ಜೋಷಿ (ಗಾಯನ) ಹಾಗೂ ಬೈಲಹೊಂಗಲ ತಾಲೂಕಿನ ಗಜಮಿನಾಳದ ಡಾ. ಅರಣ್ಯ ಕುಮಾರ್ (ಸಿತಾರ) ಯುವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಟ್ರಸ್ಟ್ ಗಳು ನೀಡುವ ಪ್ರಶಸ್ತಿ ಮೊತ್ತವು ರೂ 10ಸಾವಿರ ಮೀರುವಂತಿಲ್ಲ ಎಂಬ ಸರ್ಕಾರ ಸೂಚನೆ ಮೇರೆಗೆ ಇದೇ ಮೊದಲ ಬಾರಿ ಪ್ರಶಸ್ತಿ ಪುರ ಸ್ಕೃತರಿಗೆ ನಗದು ಬಹುಮಾನ ನೀಡುವಂತಿಲ್ಲ.
3. ಕೇರಳದಲ್ಲಿ ಮಳೆ ಮುನ್ನೆಚ್ಚರಿಕಾ ಕೇಂದ್ರ
- ಚಂಡಮಾರುತದ ಮುನ್ನೆಚ್ಚರಿಕಾ ಕೇಂದ್ರವನ್ನು (ಸಿಡಬ್ಯ್ಲೂಸಿ) ತಿರುವನಂತಪುರಂ ನಲ್ಲಿ ಕೇಂದ್ರ ಸರ್ಕಾರ ನಿರ್ಧರಿಸಿದೆ.
- ಸದ್ಯ ಭಾರತದಲ್ಲಿ ಚೆನ್ನೈ, ಭುವನೇಶ್ವರ, ವಿಶಾಖಪಟ್ಟಣಂ, ಅಹಮದಾಬಾದ್ ಮತ್ತು ಮುಂಬೈಯಲ್ಲಿ ಇಂತಹ ಕೇಂದ್ರಗಳಿವೆ.
- ಚೆನ್ನೈ ಕೇಂದ್ರವು ದಕ್ಷಿಣ ಭಾರತದ ಉಸ್ತುವಾರಿ ನೋಡಿಕೋಳ್ಳುತಿದೆ.
ಮಂಗಳೂರಿನಲ್ಲಿ ರೆಡಾರ್ :
- 2019 ರ ಹೊತ್ತಿಗೆ ಮಂಗಳೂರಿನಲ್ಲಿ ಹವಾಮಾನ ಅಧ್ಯಯನಕ್ಕೆ ಸಿ. ಬ್ಯಾಂಡ್ ಡಾಪ್ಲರ್ ರೆಡಾರ್ ಅಳವಡಿಸಲಾಗುವುದು.
4. ಸಿಗರೇಟ್ ಪ್ಯಾಕೆಟ್ ಮೇಲೆ ಹೊಸ ವಾರ್ನಿಂಗ್
- ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಮೇಲೆ ಹೊಸ ಚಿತ್ರಸಹಿತ ಎಚ್ಚರಿಕೆಯನ್ನು ಪ್ರಕಟಿಸಬೇಕು ಜತೆಗೆ ಸಿಗರೇಟಟು ತೊರೆಯಲು ಬಯಸುವ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಸಹಾಯವಾಣಿ ಸಂಖೆಯನ್ನು ಪ್ರಕಟಿಸಬೇಕು.
- ಸೆಪ್ಟೆಂಬರ್ 01 ರಿಂದ ಈ ಕ್ರಮ ಜಾರಿಗೆ ತರಬೇಕು ಎಂದು ಆರೋಗ್ಯ ಸಚಿವಾಲಯ ಆದೇಶಿಸಿದೆ.
- ತಂಬಾಕಿನಿಂದ ಕ್ಯಾನ್ಸರ್ ಬರುತ್ತದೆ ಯಾತನೆಯ ಸಾವಿಗೆ ತಂಬಾಕು ಕಾರಣ ಎನ್ನುವ ಅರ್ಥವನ್ನು ಇಂಗ್ಲೀಷ್ ಸಂದೇಶಗಳನ್ನು ಕೆಂಪ್ಪು ಬಣ್ಣದ ಹಿನ್ನೆಲೆಯಲ್ಲಿ ಬಿಳಿ ಬಣ್ಣದಲ್ಲಿ ಪ್ರಕಟಿಸಬೇಕು ಜೊತೆಗೆ “ಕ್ವಟ್ ಟುಡೇ ಕಾಲ್” ಎಂಬುವುದಾಗಿ ಕಪ್ಪು ಹಿನ್ನೆಲೆಯ ಮೇಲೆ ಬಿಳಿ ಅಕ್ಷರದಲ್ಲಿ ಪ್ರಕಟಿಸಬೇಕು.
5. ರಾಷ್ಟೀಯ ಪೌಷ್ಟಿಕಾಂಶ ಮಾಸ
- ರಾಷ್ಟದ ಪ್ರಗತಿಗೆ ಮಾರಕವಾಗಿ ಪರಿಣಮಿಸಿರುವ ಅಪೌಷ್ಟಿಕತೆ ವಿರುದ್ದ ಹೋರಾಡಲು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಮುಂದಾಗಿದೆ.
- ಇದಕ್ಕಾಗಿ ಅದು ಸಪ್ಟೆಂಬರ್ ಅನ್ನು ರಾಷ್ಟೀಯ ಪೌಷ್ಟಿಕಾಂಶ ಮಾಸವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ.
- ಈ ತಿಂಗಳಲ್ಲಿ ಮಕ್ಕಳ ಬೆಳವಣಿಗೆ ಕುಂಠಿತಗೊಳ್ಳುವುದು ಪೌಷ್ಟಿಕತೆಯ ಕೊರತೆ ರಕ್ತಹೀನತೆ ಮತ್ತು ದೇಹತೂಕ ಕಡಿಮೆ ಇರುವ ಶಿಶುಗಳಿಗೆ ಜನನದಂತಹ ಸಮಸ್ಯೆಗಳಲ್ಲದೇ, ಹದಿಹರೆಯದ ಹೆಣ್ಣುಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳು ಮತ್ತು ಅವುಗಳ ನಿರ್ವಹಣೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಮೂಲಗಳು ತಿಳಿಸಿವೆ.
ಅಂತರರಾಷ್ಟ್ರೀಯ
1. ರೂಟ್ಸ್ ಆನ್ ಲೈನ್ ಕಂಪನಿ ವರದಿ
- ಪ್ರಸಕ್ತ ಸಾಲಿನ ಜನವರಿ ಯಿಂದ ಜೂನ್ ವರೆಗೆ ವಿಮಾನಯಾನ ಸೇವೆ ಮಾಹಿತಿ ಆಧರಿಸಿ ರೂಟ್ಸ್ ಆನ್ ಲೈನ್ ಕಂಪನಿ ನಡೆಸಿದ ಅಧ್ಯಯನದ ವರದಿ.
- ಪ್ರಪಂಚದ ಅತಿ ವೇಗದ ಬೆಳವಣಿಗೆ ಹೊಂದುತ್ತಿರುವ ಏರ್ ಪೋರ್ಟ್ ಗಳ ಬಗ್ಗೆ ಮಾಹಿತಿ.
ಅತಿ ವೇಗದ ಬೆಳವಣಿಗೆ ಹೊಂದುತ್ತಿರುವ ಏರ್ ಪೋರ್ಟ್ ಗಳು ಮತ್ತು ಸ್ಥಾನ
1 ನೇ ಸ್ಥಾನ |
ಹನೇಡಾ ಅಂತರರಾಷ್ಟ್ರೀಯ ವಿಮಾನ ನಿಲ್ಧಾಣ ಜಪಾನ್ (ಟೋಕಿಯೋ) |
2 ನೇ ಸ್ಥಾನ |
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ಧಾಣ (ಬೆಂಗಳೂರು) |
3 ನೇ ಸ್ಥಾನ |
ಸಿ ಜಿ ಕೆ ಜಕಾರ್ತ್ |
4 ನೇ ಸ್ಥಾನ |
ಒ.ಆರ್.ಡಿ ಚಿಕಾಗೊ |
5 ನೇ ಸ್ಥಾನ |
ಎಮ್.ಎ.ಡಿ (ಮ್ಯಾಡ್ರಿಡ್) |
6 ನೇ ಸ್ಥಾನ |
ಡಿ.ಇ.ಎಲ್ ದೆಹಲಿ |
7 ನೇ ಸ್ಥಾನ |
ಪೋರ್ಟ್ ವರ್ತ್ ಡಲ್ಲಾಸ್ |
8 ನೇ ಸ್ಥಾನ |
ಎಲ್ ಎ ಎಕ್ಸ್ ಲಾಸ್ ಏಂಜಲಿಸ್ |
9 ನೇ ಸ್ಥಾನ |
ಎಫ್ ಆರ್ ಎ ಫ್ರಾಂಕ್ ಫರ್ಟ್ |
10 ನೇ ಸ್ಥಾನ |
ಕೆ ಹೆಚ್ ಎನ್ ನನ ಚಾಂಗ್ |
- ಪ್ರಯಾಣಿಕರನ್ನು ನಿರ್ವಹಿಸುವ ಶೇಕಡಾವಾರು ಲೆಕ್ಕದಲ್ಲಿ ಚೀನಾದ ಪ್ಯೂಜಿಯಾಮ ಪ್ರಾಂತ್ಯದ ಕ್ವಾನ್ಝಾ ನಗರದ ಜಿಂಜಿಯಾಂಗ್ ಏರ್ ಪೋರ್ಟ್ ಪ್ರಥಮ ಸ್ಥಾನ (ಶೇ 58.6) ದಲ್ಲಿದೆ. ಕೆಐಎಎಲ್ ಶೇ 35.8, ಜೈಪುರ ಶೇ 32.5, ಲಕ್ನೋ ಶೇ 31.4 ಹೈದರಾಬಾದ್ ಶೇ 23.2, ಕ್ರಮವಾಗಿ 8,10,11 ಮತ್ತು 20ನೇ ಸ್ಥಾನದಲ್ಲಿವೆ.
ಆರ್ಥಿಕ
1. IBHFL ಗೆ RBI ನ ಡೆಪ್ಯೂಟಿ ಗವರ್ನರ್ ಎಸ್ಎಸ್ ಮುಂದ್ರಾ ರಾಷ್ಟದ 2ನೇ ಅತಿದೊಡ್ಡ ಗೃಹ ಸಾಲ ವಿತರಣೆ ಸಂಸ್ಥೆ
- ಇಂಡಿಯಾ ಬುಲ್ಸ್ ಹೌಸಿಂಗ್ ಪೈನಾನ್ಸ್ (IBHFL) ಸ್ವತಂತ್ರ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ 3 ವರ್ಷಗಳ ಅವಧಿಗೆ ನೇಮಕಾತಿ ಮಾಡಲಾಗಿದೆ.
ಕ್ರೀಡೆ
1. ಏಷ್ಯಾನ್ ಕ್ರೀಡಾಕೂಟ
- 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನ ಗೆದ್ದ ಸೌರಭ್ ಚೌಧರಿ.
- 50 ಮೀಟರ್ ರೈಫಲ್- 3 ಪೊಸಿಷನ್ ವಿಭಾಗದಲ್ಲಿ ಬೆಳ್ಳಿ ಜಯಿಸಿದ ಸಂಜೀವ್
- 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಭಾರತದ ಅಭಿಷೇಕ್ ವರ್ಮಾ ರವರು ಕಂಚಿನ ಪದಕ ಪಡೆದರು
ದಿವ್ಯಾ ಕಕ್ರಾನ್
- ರಿಪೆಚೇಜ್ ಸುತ್ತಿನಲ್ಲಿ ಅಮೋಘ ಸಾಮಥ್ರ್ಯ ತೋರಿದ ಭಾರತದ ದಿವ್ಯಾ ಕಕ್ರಾನ್ ಏಷ್ಯಾನ್ ಕೂಟದ ಕುಸ್ತಿಯಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.
- ಮಹಿಳೆಯರ 68 ಕೆ.ಜಿ ಫ್ರೀಸ್ಪೈಲ್ ವಿಭಾಗದ ಕಂಚಿನ ಪದಕದ ಹಣಾಹಣಿಯಲ್ಲಿ ಚೀನಾ ತೈಪೆಯ ಚೆನ್ ವೆನ್ಲಿಂಗ್ ಅವರನ್ನು ಪರಾಭವಗೊಳಿಸಿದರು.