05 ನೇ ಡಿಸೆಂಬರ್ , 2018-ಪ್ರಚಲಿತ ಘಟನೆಗಳು
(ಪುಟದ ಕೊನೆಯಲ್ಲಿ PDF ನ್ನು ಡೌನ್ ಲೋಡ್ ಮಾಡಿಕೊಳ್ಳಿ)
ರಾಜ್ಯ
1. ರಂಗಕರ್ಮಿ ಪ್ರಸನ್ನಗೆ ಸಂದೇಶ ಪ್ರಶಸ್ತಿ
- 2019ರ ಸಾಲಿನ ಸಂದೇಶ ಪ್ರಶಸ್ತಿಗೆ ಖ್ಯಾತ ರಂಗಕರ್ಮಿ ಪ್ರಸನ್ನ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂದೇಶ ಪ್ರತಿಷ್ಠಾನ ಹೇಳಿದೆ.
- ಸಂದೇಶ ಕಲಾ ಪ್ರಶಸ್ತಿ ಬಳ್ಳಾರಿಯ ಮಂಜಮ್ಮ ಜೋಗತಿ, ಸಂದೇಶ ಮಾಧ್ಯಮ ಪ್ರಶಸ್ತಿ ಪತ್ರಕರ್ತರಗಿದ್ದಾರೆ.
- ಗುರುಪುರದ ಸ್ನೇಹಸದನ್ ಮತ್ತು ಜೀವದಾನ್ ಸಂಸ್ಥೆ ನೀಡಲಾಗುತ್ತಿದೆ.
2. ‘ಅಬ್ಬೆ‘ ಪ್ರಶಸ್ತಿಗೆ ರಾಣಿ ಸತೀಶ ಆಯ್ಕೆ
- ಬಾಗಲಕೋಟೆಯ ಜಿಲ್ಲೆಯ ಬೀಳಗಿ ತಾಲೂಕಿನ ಬಾಡಗ೦ಡಿಯ ಪಾಟೀಲ ಶಿಕ್ಷಣ ಪ್ರತಿಷ್ಠಾನದಿ೦ದ ರಾಣಿ ಸತೀಶ್ ಕೊಡಮಾಡುವ ಈ ಸಾಲಿನ ‘ಅಬ್ಬೆ’ ಪ್ರಶಸ್ತಿಗೆ ಕಾಂಗ್ರೆಸ್ ಮುಖ೦ಡರಾದ ರಾಣಿ ಸತೀಶ್ ಹಾಗೂ ‘ಕೃಷಿ’ ಪ್ರಶಸ್ತಿಗೆ ಬಾಗಲಕೋಟೆ ಮಲ್ಲಣ್ಣ ಮೇಟಿ ಜಿಲ್ಲೆಯ ಮಲ್ಲಣ್ಣ ಚ೦ದ್ರಶೇಖರ ಮಟ ಭಾಜನರಾಗಿದ್ದಾರೆ.
3. ನೈಜ ಸಾಧಕ ಕಾಗಣೀಕರ್ಗೆ ಅರಸು ಸಮಾನ
- ವಾಸಕ್ಕೆ ಸ್ವಂತ ಮನೆ, ತಿರುಗಾಡಲು ಸ್ವಂತ ವಾಹನವಿಲ್ಲದೇ ಇದ್ದರೂ ರೈತರು ಹಾಗೂ ಕೂಲಿ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಕಲ್ಪಿಸಲು 14 ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದ ಬೆಳಗಾವಿಯ ಶಿವಾಜಿ ಛತ್ರಪ್ಪ ಕಾಗಣಿಕರ ಈ ಬಾರಿಯ ದೇವರಾಜ ಅರಸು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಜನಪರ ಸೇವಾ ಕಾರ್ಯಗಳು
- 1968ರಲ್ಲಿ ‘ಜನ ಜಾಗರಣ ಸಂಸ್ಥೆ ಸ್ಥಾಪನೆ
- ಅರಣ್ಯ ವಾಸಿ ಬೇಡ, ಮರಾಠ, ಕುರುಬ ಸಮುದಾಯಗಳಲ್ಲಿ ಶೈಕ್ಷಣಿಕ ಜಾಗೃತಿ
- ಕಡೋಲಿ ಗ್ರಾಮದಲ್ಲಿ 14,000 ಕ್ಕೂ ಹೆಚ್ಚು ‘ದೀನಬಂಧು’ ಗೋಬರ್ ಗ್ಯಾಸ್ ಘಟಕ ನಿರ್ಮಾಣ
- 1978ರಲ್ಲಿ ಬೆಳಗಾವಿ ಮತ್ತು ಹುಕ್ಕೇರಿಯಲ್ಲಿ ಮಹಿಳಾ ಬಚತ್ ಘಟ್ ( ಮಹಿಳಾ ಉಳಿತಾಯ ಸಂಘ )
- ಮಹಿಳೆಯರಲ್ಲಿ ಸಣ್ಣ ಉಳಿತಾಯಕ್ಕೆ ಉತ್ತೇಜನ ಜನಧನ ಸಂಸ್ಥೆ ಜತೆ 3 ಲಕ್ಷಕ್ಕೂ ಹೆಚ್ಚು ಗಿಡ ನೆಟ್ಟು ಪರಿಸರ ಸಂರಕ್ಷಣೆ
- 2009ರಲ್ಲಿ ಜೀವನ ಶಿಕ್ಷಣ ಪ್ರತಿಷ್ಠಾನ ಆರಂಭ
- 114 ಶಿಕ್ಷಣ ಪಾಲನಾ ಕೇಂದ್ರ
ಬೆಂಗಳೂರು ನಗರಕ್ಕೆ ಮತ್ತೆ ಹರಿಯಲಿದೆ ಚಾಮರಾಜಸಾಗರ
- ತಿಪ್ಪಗೊಂಡನಹಳ್ಳಿಯ ಚಾಮರಾಜಸಾಗರ ಜಲಾಶಯದ ಪುನಃಶ್ವೇತನಕ್ಕೆ ಜಲಮಂಡಳಿ ಮುಂದಾಗಿದೆ. ಎತ್ತಿನಹೊಳೆ ಯೋಜನೆಯಿಂದ ಈ ಜಲಾಶಯಕ್ಕೆ 1.7 ಟಿಎಂಸಿ ಅಡಿ ನೀರು ಹರಿಸಲು ಯೋಜಿಸಿದೆ.
- ಅದನ್ನು ಶುದ್ದೀಕರಿಸಿ, ನಗರಕ್ಕೆ ಪೂರೈಸಲು ಮಂಡಳಿ ನಿರ್ಧರಿಸಿದೆ.
ರಾಷ್ಟ್ರೀಯ
1. ಶತಾಯುಷಿ ಪಾಕ ಪ್ರವೀಣೆ ಮಸ್ತಾನಮ್ಮ ನಿಧನ
- ಅಪ್ಪಟ ನಾಟಿ ಶೈಲಿಯ ಅಡುಗೆಗಳನ್ನು ಮಾಡುತ್ತ ಯೂಟ್ಯೂಬ್ ವಿಡಿಯೊಗಳು ಮೂಲಕ ಲಕ್ಷಾಂತರ ಖಾದ್ಯ ಪ್ರಿಯರ ಮನಗೆದ್ದಿದ್ದ 107 ವರ್ಷದ ಕಾರೆ ಮಸ್ತಾನಮ್ಮ ಆಂಧ್ರ ಪ್ರದೇಶದ ಗುಂಟೂರು ಗ್ರಾಮದಲ್ಲಿ ನಿಧನ ಹೊಂದಿದ್ದಾರೆ.
2. ಮಹಿಳಾ ಪೈಲಟ್ಗಳು ಭಾರತದಲ್ಲೇ ಅಧಿಕ
- ಮಹಿಳಾ ಪೈಲಟ್ಗಳ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಲ್ಲಿದೆ.
- ಇಂಟರ್ನ್ಯಾಷನಲ್ ವುಮೆನ್ ಏರ್ಲೈನ್ ಪೈಲಟ್ ಸೊಸೈಟಿ ಹೇಳಿರುವ ಪ್ರಕಾರ, ವಿಶ್ವದ ವಿಮಾನಯಾನ ಸಂಸ್ಥೆಗಳಲ್ಲಿ ಭಾರತೀಯ ವಿಮಾನಯಾನ ಸಂಸ್ಥೆ ಅತಿಹೆಚ್ಚು ಮಹಿಳಾ ಪೈಲಟ್ ಗಳನ್ನು ಹಾಗೂ ಕ್ಯಾಪ್ಟನ್ ಗಳನ್ನು ಹೊಂದಿದೆ.
- ಭಾರತದ ಯಾವ ವಿಮಾನಯಾನ ಸಂಸ್ಥೆ ಎಷ್ಟು ಮಹಿಳಾ ಪೈಲಟ್ ಗಳನ್ನು ಹೊಂದಿದೆ ಎನ್ನುವುದರ ಸಂಕ್ಷಿಪ್ತ ಮಾಹಿತಿ
- 155 ಲಕ್ಷ – ವಿಶ್ವದ ಎಲ್ಲಾ ವಿಮಾನಯಾನ ಸಂಸ್ಥೆಗಳಲ್ಲಿರುವ ಮಹಿಳಾ ಪೈಲಟ್ಗಳ ಸಂಖ್ಯೆ
- 8,477- ವಿಶ್ವದಲ್ಲಿರು ಮಹಿಳಾ ಪೈಲಟ್ಗಳ ಸಂಖ್ಯೆ
- 8,797- ಭಾರತದಲ್ಲಿರುವ ಪೈಲಟ್ಗಳ ಸಂಖ್ಯೆ
- 1092 – ಭಾರತದಲ್ಲಿರುವ ಮಹಿಳಾ ಪೈಲಟ್ಗಳು ಸಂಖ್ಯೆ
ಸಂಸ್ಥೆ | ಪೈಲಟ್ಗಳು | ಮಹಿಳಾ ಪೈಲಟ್ಗಳ | ಮಹಿಳಾ ಕ್ಯಾಪ್ಟನ್ |
ಏರ್ಏಷ್ಯಾ | 260 | 26 | 10 |
ಏರ್ ಇಂಡಿಯಾ | 1710 | 217 | 93 |
ಏರ್ ಇಂಡಿಯಾ ಎಕ್ಸ್ ಪ್ರೆಸ್ | 347 | 46 | 14 |
ಗೊ ಏರ್ | 391 | 20 | 10 |
ಇಂಡಿಗೊ | 2689 | 351 | 118 |
ಜೆಟ್ಲೈಟ್ | 114 | 15 | 5 |
ಸ್ಪೈಸ್ | 853 | 113 | 23 |
ಝೋಮ್ | 30 | 9 |
ಅಂತರರಾಷ್ಟ್ರೀಯ
1. ಒಪೆಕ್ ದೇಶಗಳ ಸಂಬಂಧ ಕತ್ತರಿಸಿಕೊಂಡ ಕತಾರ್
- ತೈಲ ಸಂಪದ್ಭರಿತ, ಆದರೆ ಸುತ್ತಮುತ್ತಲಿನ ದೇಶಗಳಿಂದ ವಾಣಿಜ್ಯ ವಹಿವಾಟಿನ ದಿಗ್ಧಂಧನ ಎದುರಿಸುತ್ತಿರುವ ಕತಾರ್, ತಾನು ತೈಲ ರಫ್ತು ರಾಷ್ಟ್ರಗಳ ಒಕ್ಕೂಟ (ಒಪೆಕ್)ದಿಂದ ಹೊರಗೆ ಹೋಗುತ್ತಿರುವುದಾಗಿ ಘೋಷಿಸಿದೆ.
- ದ್ರವೀಕೃತ ನೈಸರ್ಗಿಕ ಇಂಧನ (ಎಲ್ಎನ್ಜಿ) ರಫ್ತು ಮಾಡುವುದರಲ್ಲಿ ಕತಾರ್ ಜಗತ್ತಿಗೇ ಮೊದಲ ಸ್ಥಾನದಲ್ಲಿದೆ.
- ಆದರೆ ಪಕ್ಕದ ಸೌದಿ ಅರೇಬಿಯಾ ಮೊದಲಾದ ದೊಡ್ಡ ದೇಶಗಳೊಂದಿಗಿನ ಗುದ್ದಾಟ, ಈ ಪುಟ್ಟ ದೇಶವನ್ನು ಸಂಕಷ್ಟಕ್ಕೆ ತಳ್ಳಿದೆ.
- ಇನ್ನಷ್ಟು ದೇಶಗಳು ಕತಾರ್ ಮೇಲೆ ದಿಗಂಧನ ವಿಧಿಸುವ ಕುರಿತು ಚಿಂತಿಸುತ್ತಿದ್ದು, ಇದರಿಂದ ಕತಾರ್ ಮೇಲೂ ಇತರ ದೇಶಗಳ ಮೇಲೂ ಸಾಕಷ್ಟು ಪರಿಣಾಮವಾಗಲಿದೆ. ಕತಾರ್, ತೈಲ ರಫ್ತು ಮಾಡುವ ದೇಶಗಳು ಸೇರಿ ಕಟ್ಟಿಕೊಂಡಿರುವ ಸಂಘಟನೆ ಒಪೆಕ್ಗೆ ಸೇರಿ 57 ವರ್ಷಗಳಾಗಿವೆ. 2019ರ ಜನವರಿಯಲ್ಲಿ ಕತಾರ್ ತನ್ನ ಸದಸ್ಯತ್ವ ಕೊನೆಗೊಳಿಸಲಿದೆ.
- ತೈಲ ರಪ್ತಿನಲ್ಲಿ ತನ್ನ ಪಾತ್ರ ಅತ್ಯಲ್ಪ; ಹಾಗಾಗಿ ಎಲ್ಎನ್ಜಿ ರಫ್ತು ಕೇತ್ರದಲಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿಕೊಳ್ಳುವುದಕ್ಕಾಗಿ ಹೊರ ಹೋಗುತ್ತಿದ್ದೇನೆ ಎಂದು ಕತಾರ್ ಹೇಳಿದೆ.
ಕತಾರ್ನ ಉತ್ಪಾದನೆ :
- ಪ್ರಸ್ತುತ ದಿನಕ್ಕೆ 6 ಲಕ್ಷ ಬ್ಯಾರಲ್ ತೈಲವನ್ನೂ (ಬಿಪಿಡಿ) ಹಾಗೂ ವರ್ಷಕ್ಕೆ 7.7 ಕೋಟಿ ಟನ್ ಎಲ್ಎನ್ಜಿಯನ್ನೂ ಕತಾರ್ ಉತ್ಪಾದಿಸುತ್ತಿದೆ. ಕತಾರ್ನ ಜನಸಂಖ್ಯೆ ಸುಮಾರು 23 ಲಕ್ಷ.
- ಇದರಲ್ಲಿ ಕತಾರ್ಗೆ ಹೊರಗಿನಿಂದ ದುಡಿಯಲು ಬಂದವರೇ 88 ಶೇಕಡ ಮಂದಿ. ಜಿಡಿಪಿಯಲ್ಲಿ ವಿಶ್ವಕ್ಕೆ 52ನೇ ಸ್ಥಾನ
ಕತಾರ್- ಭಾರತ ಸಂಬಂಧ:
- ಭಾರತ ವಾರ್ಷಿಕ ಸುಮಾರು 21.53 ಕೋಟಿ ಡಾಲರ್ ಮೌಲ್ಯದ ಆಹಾರ ಧಾನ್ಯವನ್ನೂ, 10.86 ಕೋಟಿ ಡಾಲರ್ ಮೌಲ್ಯದ ಯಂತ್ರೋಪಕರಣವನ್ನೂ ಕತಾರ್ ಗೆ ಭಾರತ ರಫ್ತು ಮಾಡುತ್ತದೆ.
- ಪ್ರತಿಯಾಗಿ ಕತಾರ್ನಿಂದ 1400 ಕೋಟಿ ಡಾಲರ್ ಮೌಲ್ಯದ ತೈಲೋತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತದೆ.
ಆರ್ಥಿಕ
1. ಕಸ್ಟಮ್ಸ್ ಸುಂಕ
- ಕೇಂದ್ರ ಸರಕಾರ ಇದೀಗ ಕಸ್ಟಮ್ಸ್ ಸುಂಕ ಕ್ಷೇತ್ರದಲ್ಲಿ ಮಹಾಸುಧಾರಣೆಗೆ ಮುಂದಾಗಿದೆ. ಈ ಕ್ರಮದಿಂದ ಆಮದು ಮತ್ತು ರಫ್ತು ಉದ್ಯಮಕ್ಕೆ ಭಾರಿ ಲಾಭವಾಗಲಿದ್ದು,
- ದೇಶದ ಉದ್ಯಮ ಸ್ನೇಹಿ ಸೂಚ್ಯಂಕ ಈಗಿರುವ 77ನೇ ಸ್ಥಾನದಿಂದ 50ರ ಗಡಿಯನ್ನೂ ಮೀರುವ ಆಶಾವಾದ ವ್ಯಕ್ತವಾಗಿದೆ.
ಕಸ್ಟಮ್ಸ್ ಸುಂಕ ಎಂದರೇನು?
- ಹೊರದೇಶಗಳಿಗೆ ರಫ್ತು ಮಾಡುವ ಮತ್ತು ಇತರೆ ದೇಶಗಳಿಂದ ಆಮದು ಮಾಡಿಕೊಳ್ಳುವ ಸರಕುಗಳಿಗೆ ವಿಧಿಸುವ ತೆರಿಗೆಯನ್ನು ಕಸ್ಟಮ್ಸ್ ಸುಂಕ ಎಂದು ಕರೆಯಲಾಗುತ್ತದೆ.
- ಸರಕುಗಳು ಅದರಲ್ಲೂ ನಿರ್ಬಂಧಿತ ಮತ್ತು ನಿಷೇಧಿತ ಸರಕುಗಳ ಸಾಗಣೆಯನ್ನು ನಿಯಂತ್ರಿಸುವ ಮೂಲಕ ಪ್ರತಿಯೊಂದು ದೇಶದ ಆರ್ಥಿಕತೆ, ಜನರು, ಉದ್ಯೋಗ, ವಾತಾವರಣವನ್ನು ಕಾಪಾಡುವುದು ಈ ಕಸ್ಟಮ್ಸ್ ಸುಂಕದ ಉದ್ದೇಶವಾಗಿದೆ.
ಪರಿಣಾಮವೇನು?:
- ಉದ್ಯಮಿಗಳು, ವರ್ತಕರಿಗೆ ಸರಕುಗಳ ಸಾಗಣೆ ಮತ್ತಷ್ಟು ಸುಗಮವಾಗುತ್ತದೆ. ಹಲವಾರು ತೆರಿಗೆ ತೊಡಕುಗಳು ಬಗೆಹರಿಯುತ್ತದೆ. ಉದಾಹರಣೆಗೆ ಒಬ್ಬ ಆಮದುದಾರ ಚೆನ್ನೈನ ಬಂದರಿಗೆ ಬಂದಿರುವ ಸರಕುಗಳ ಮೌಲ್ಯ ಮಾಪನಕ್ಕೆ ಸ್ಥಳೀಯ ಕಸ್ಟಮ್ಸ್ ಅಧಿಕಾರಿಗಳನ್ನು ಮುಖತಃ ಭೇಟಿಯಾಗಬೇಕಿಲ್ಲ. ದಿಲ್ಲಿಯಲ್ಲಿದ್ದುಕೊಂಡೇ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಳಿಸಿ ತನ್ನ ಸರಕುಗಳ ಸಾಗಣೆ ಮಾಡಬಹುದು.
- ಆಟೊಮ್ಯಾಟಿಕ್ ಆಗಿ ಸರಕುಗಳ ತಪಾಸಣೆ, ಮಾಪನ ನಡೆಯುತ್ತದೆ.
- ಇ-ಮೇಲ್, ಎಸ್ಸೆಮ್ಮೆಸ್ ಅಲರ್ಟ್ ಮೂಲಕ ಉದ್ಯಮಿಗೆ ತನ್ನ ಸರಕುಗಳು ಬಂದರಿನಿಂದ ಬಿಡುಗಡೆಗೆ ಸಿದ್ದವಾಗಿರುವುದು ಗೊತ್ತಾಗುತ್ತದೆ.
ದಾಖಲೆಗಳು ಆನ್ಲೈನ್ನಲ್ಲಿ ಲಭ್ಯ:
- ಇ-ಸಂಚಿತ್ ಸೌಲಭ್ಯ ಕಸ್ಟಮ್ಸ್ ಶುಲ್ಕಕ್ಕೂ ವಿಸ್ತರಣೆಯಾಗಲಿದ್ದು, ಆಮದುದಾರರು ಮತ್ತು ರಫ್ತುದಾರರು ಆನ್ಲೈನ್ಲ್ಲಿ ಎಲ್ಲ ದಾಖಲೆಗಳನ್ನು ಅಪ್ಲೋಡ್ ಮಾಡಬಹುದು. ಕಸ್ಟಮ್ಸ್ ಸುಂಕ ವ್ಯವಸ್ಥೆ ಪೇಪರ್ ಲೆಸ್ ಆಗಲಿದೆ.
ಏನೇನು ಬದಲಾವಣೆ?
- ನಾನಾ ವಸ್ತುಗಳಿಗೆ ನಾನಾ ರೀತಿಯ ಕಸ್ಟಮ್ಸ್ ಶುಲ್ಕವಿದ್ದು, ಜಿಎಸ್ಟಿಯಂತೆ ಕೆಲವೇ ಶ್ರೇಣಿಗೆ ಇಳಿಕೆ
- ಕಸ್ಟಮ್ಸ್ ಶುಲ್ಕದಲ್ಲಿರುವ ನಾನಾ ವಿಧಗಳನ್ನು ಸರಳೀಕರಿಸಿ ಕೆಲವೇ ವಿಭಾಗ ರಚನೆ
- ಅಧಿಕಾರಿಗಳ ಜತೆ ಮುಖಾಮುಖಿ ಇಲ್ಲದೆಯೇ ಕಸ್ಟಮ್ಸ್ ಕ್ಲಿಯರೆನ್ಸ್
- ಆನ್ಲೈನ್ನಲ್ಲಿಯೇ ದಾಖಲೆ ಸಲ್ಲಿಕೆ, ಮೌಲ್ಯಮಾಪನ
- ಒಂದು ವರ್ಗದ ವಸ್ತುವಿಗೆ ಒಂದೇ ಕಡೆ ಮೌಲ್ಯಮಾಪನ
- ಸರಕು ಬಂದರಿನಿಂದ ಹೊರಟ ತಲುಪಿದ ಬಗ್ಗೆ ಉದ್ಯಮಿಗಳಿಗೆ ಆನ್ಲೈನ್ ಅಲರ್ಟ್
ಪರಿಣಾಮಗಳೇನು?
- ಆನ್ಲೈನ್ನಲ್ಲೇ ದಾಖಲೆ ಸಲ್ಲಿಕೆಯಿಂದಾಗಿ ಸಮಯ ಉಳಿತಾಯ
- ಅಧಿಕಾರಿಶಾಹಿ ವ್ಯವಸ್ಥೆಯಿಂದ ಮುಕ್ತಿ, ಭ್ರಷ್ಟಾಚಾರಕ್ಕೆ ಕಡಿವಾಣ
- ಸರಕುಗಳ ತ್ವರಿತ ಸಾಗಾಣಿಕೆ, ಕ್ಲಿಯರೆನ್ಸ್ ಗೆ ಅವಕಾಶ
- ಸರಕುಗಳು ಎಲ್ಲಿವೆ ಎಂದು ಟ್ರ್ಯಾಕ್ ಮಾಡಬಹುದು
- ರಫ್ತುದಾರರಿಗೆ ಸೀಮಾತೀತ, ಪೇಪರ್ಲೆಸ್ ಅನುಭವ.
- ಜಿಎಸ್ಟಿ ವಂಚನೆ ತಡೆಗೆ ಡೇಟಾ ಅನಾಲಿಟಿಕ್ಸ್ ತಂತ್ರಜ್ಞಾನ.
ವಿಜ್ಞಾನ
1. ಬಾಹ್ಯಾಕಾಶಕ್ಕೆ ಜಿಗಿದ ಜಿಸ್ಯಾಟ್ 11
- ಭಾರತದ ಭಾರದ ಉಪಗ್ರಹ ಜಿಸ್ಯಾಟ್-11 ಅನ್ನು ಯುರೋಪಿಯನ್ ಸ್ಪೇಸ್ ಏಜೆನ್ಸಿ ರಾಕೆಟ್ ಮೂಲಕ ಫ್ರೆಂಚ್ ಗಯಾನಾದಿಂದ ನಭಕ್ಕೆ(ಡಿ.5) ಉಡಾವಣೆ ನಡೆದಿದೆ.
- ಈ ಉಪಗ್ರಹ ಹೈಸ್ಪೀಡ್ ಇಂಟರ್ನೆಟ್ ಸೌಲಭ್ಯ ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ.
- ಉಪಗ್ರಹದ ತೂಕ 5,854 ಕಿಲೋ
- ಸೋಲಾರ್ ಪ್ಯಾನೆಲ್ ಉದ್ದ 4 ಮೀಟರ್
- ಭೂಮಿಯಿಂದ 36,000 ಕಿಮೀ ದೂರದ ಅಂತರಿಕ್ಷ ಕಕ್ಷೆಯಿಂದ ಕಾರ್ಯಾಚರಣೆ
- ಫ್ರೆಂಚ್ ಗಯಾನಾದಿಂದ ಉಡಾವಣೆ
- ಪ್ರತಿಸೆಕೆಂಡಿಗೆ 100 ಗಿಗಾಬೈಟ್ ಬ್ರಾಡ್ ಬ್ಯಾಂಡ್ ಕನೆಕ್ಟಿವಿಟಿ
ಕ್ರೀಡೆ
1. ಗಂಭೀರ್ ವಿದಾಯ
- ಭಾರತದ ಟಿ-20 ಮತ್ತು ಏಕದಿನ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಎಡಗೈ ಆರಂಭಿಕ ಬ್ಯಾಟ್ಸ್ ಮನ್ ಗೌತಮ್ ಗಂಭೀರ್ ಎಲ್ಲ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.
- ಎರಡು ವಿಶ್ವಕಪ್ ಗೆಲುವಿನ ಹೀರೋ 2007ರ ಚೊಚ್ಚಲ ಟಿ-20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಗೌತಮ್ ಗಂಭೀರ್ ಅಮೋಘ ಬ್ಯಾಟಿಂಗ್ ಮೂಲಕ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಮಾದರಿ |
ಪಂದ್ಯ | ರನ್ | ಶತಕ | ಅರ್ಧಶತಕ |
ಏಕದಿನ |
147 | 5238 | 11 |
34 |
ಟೆಸ್ಟ್ | 58 | 4154 | 9 |
22 |
2. ಭಾರತಕ್ಕೆ ಮೊದಲ ಪ್ರಶಸ್ತಿ ತಂದ ಉಲ್ಲಾಸ್
- ಅಂತಾರಾಷ್ಟ್ರೀಯ ಅಲ್ಟ್ರಾ ರನ್ನಿಂಗ್ ರೇಸ್ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಕೀರ್ತಿ ಬೆಂಗಳೂರಿನ ಉಲ್ಲಾಸ್ ನಾರಾಯಣ್ಗೆ ಸಲ್ಲುತ್ತದೆ.
- ಇಂತಹ ತೈವಾನ್ನ ತೈಪೈ ನಗರದಲ್ಲಿ ನಡೆದ ಅಂತಾರಾಷ್ಟ್ರೀಯ ಅಸೋಸಿಯೇಷನ್ ಆಫ್ ಅಲ್ಟ್ರಾರನ್ನಿಂಗ್ (ಐಎಯು) 2018ರ 24 ಗಂಟೆ ಏಷ್ಯಾ ಆ್ಯಂಡ್ ಓಷಿಯಾನಿಯಾ ಚಾಂಪಿಯನ್ಷಿಪ್ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.
- ಸಾಂಪ್ರದಾಯಿಕ ಓಟಕ್ಕಿಂತ ಹೆಚ್ಚು ದೂರ ಓಡುವ ಓಟವೇ ಅಲ್ಟ್ರಾ ರೇಸ್ .
3. ಲೂಕಾ ಮೋಡ್ರಿಕ್ ಫುಟ್ಬಾಲ್ ಆಟಗಾರ .
- ಕ್ರೊವೇಷಿಯಾದ ಫುಟ್ಬಾಲ್ ತಂಡದ ನಾಯಕ ಮಿಡ್ ಫೀಲ್ಡರ್ ಲೂಕಾ ಮೋಡ್ರಿಕ್ 2018ನೇ ಸಾಲಿನ ಬಾಲನ್ ಡಿ ಓರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪ್ರಶಸ್ತಿಯನ್ನು ಫ್ರಾನ್ಸ್ ಫುಟ್ಬಾಲ್ ನಿಯತಕಾಲಿಕೆ ನೀಡುತ್ತದೆ.
- 2007ರಿಂದ ಈಚೆಗೆ ರೊನಾಲ್ಡೊ ಮತ್ತು ಮೆಸ್ಸಿಯನ್ನು ಹೊರತುಪಡಿಸಿ ಇತರೆ ಯಾವ ಆಟಗಾರರು ಈ ಪ್ರಶಸ್ತಿಯನ್ನು ಪಡೆದಿರಲಿಲ್ಲ.
- 33 ವರ್ಷದ ಮೋಡ್ರಿಕ್ 2018ರ ಫಿಫಾ ವಿಶ್ವಕಪ್ ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು (ಚಿನ್ನದ ಚೆಂಡು) ಗೆದ್ದಿದ್ದರು.
- ಜೊತೆಗೆ ಈ ವರ್ಷದ ಫಿಫಾ ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ.
- ಬಾಲನ್ ಡಿ ಓರ್ ಪ್ರಶಸ್ತಿಗೆ, ಜಗತ್ತಿನಾದ್ಯಂತ ಇರುವ ಕ್ರೀಡಾ ಪತ್ರಕರ್ತರು ಮತದಾನ ಮಾಡುವ ಮೂಲಕ 30 ಫುಟ್ಬಾಲ್ ಆಟಗಾರರ ಪಟ್ಟಿಯಿಂದ ಲೂಕಾ ಅವರನ್ನು ಆಯ್ಕೆ ಮಾಡಿದ್ದಾರೆ.