iasjnana
Essay
ಸಾಮಾಜಿಕ ಜಾಲತಾಣಗಳ ಪರಿಣಾಮಗಳು
“ಸಾಮಾಜಿಕ ಜಾಲತಾಣಗಳು ಸಹಸ್ರಾರು ಕಂಪ್ಯೂಟರ್  ಜಾಲಗಳ ನಡುವೆ ಸಂಪರ್ಕ ಏರ್ಪಡಿಸಿ ಜನರ ನಡುವೆ ನಿಕಟ ಸಂಪರ್ಕ ಕಲ್ಪಿಸುವ ವೇದಿಕೆಯಾಗಿವೆ”.
ಸಾಮಾಜಿಕ ಜಾಲತಾಣಗಳು ಕಂಪ್ಯೂಟರ್ ಮಧ್ಯವರ್ತಿಯಾಗಿರುವ ಮಾಧ್ಯಮ ಅದರ ಮೂಲಕ ಮಾಹಿತಿಗಳು, ಚಿತ್ರಗಳು, ಮತ್ತು ವಿಡಿಯೋಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಎಷ್ಟು ಕ್ಷಿಪ್ರ ಪ್ರಗತಿಯಲ್ಲಿ ಅವಿಷ್ಕಾರಗಲು ಆಗುತ್ತಿವೆ ಎಂದರೆ ವ್ಯಾಖ್ಯಾನಿಸಲು ಕಷ್ಟಸಾಧ್ಯ. ಸಾಮಾಜಿಕ ಜಾಲತಾಣ ಸೇವೆ ಎನ್ನುವುದು ಸಾಮಾಜಿಕ ಜಾಲತಾಣಗಳು ಮತ್ತು ಜನರ ನಡುವೆ ನಿಕಟ ಸಂಪರ್ಕ ಕಲ್ಪಿಸುವ ವೇದಿಕೆಯಾಗಿದೆ. ಇದು ಸಾರ್ವಜನಿಕವಾಗಿ ಲಭ್ಯವಾಗಿ ಇಂಟರ್‍ವೆಲ್ ಪ್ರೋಟೋಕಾಲ್ ಮೊದಲಾದ ವ್ಯವಸ್ಥೆಗಳ ಮೂಲಕ ಮಾಹಿತಿ ಸಂವಹನ ನಡೆಸುತ್ತವೆ. ಸರ್ಕಾರಿ, ಶೈಕ್ಷಣಿಕ, ಮತ್ತು ವಾಣಿಜ್ಯ ಸಂಸ್ಥೆಗಳ ಅನೇಕ ಜಾಲಗಳಿದ್ದು ಅವನ್ನು ಒಂದಕ್ಕೊಂದು ಕೂಡಿಸಿ ಸೃಷ್ಟಿಸಿದ ಬೃಹತ್ ಜಾಲವೇ ಅಂತರ್ಜಾಲ. ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಯನ್ನು ಕೋ ಆಕ್ಸಿಲ್, ಕೇಬಲ್, ತಾಮ್ರದ ತಂತಿ ವಯರ್‍ಲೆಸ್ ಹೀಗೆ ಬೇರೆ ಬೇರೆ ರೀತಿಯಲ್ಲಿ ಮಾಹಿತಿ ಅಂತರ್ಜಾಲದ ಮೂಲಕ ಸಾಗುತ್ತವೆ. ಸಾಮಾಜಿಕ ಜಾಲತಾಣಗಳು ಪ್ರತಿನಿತ್ಯ ಜೀವನದಲ್ಲಿ ಅಗಾಧವಾದ ಪರಿಣಾಮ ಬೀರುತ್ತಿವೆ. ಇವುಗಳ ಬಳಕೆದಾರರು ಹೆಚ್ಚಾಗಿದ್ದು, ಜೀವನಶೈಲಿ ಬದಲಾವಣೆಗೂ ಕಾರಣವಾಗಿವೆ.
• ಸಾಮಾಜಿಕ ಜಾಲತಾಣಗಳ ಇತಿಹಾಸ :
ಮೊಟ್ಟ ಮೊದಲು ಭಾರತದಲ್ಲಿ 1988ರಲ್ಲಿ ಮುಂಬೈಯ “ಅರ್ನೆಟ್ ಟೀಂ” ಅಂತರ್ಜಾಲ ಸಂಪರ್ಕ ಪಡೆದುಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಗಳು ಪ್ರಾರಂಭವಾದವು. ನಂತರ ಅಹ್ಮದಾಬಾದ್, ಪುಣೆ, ಬರೋಡಾ, ಕೋಲ್ಕತ್ತಾ, ಚೆನ್ನೈ ಮುಂತಾದ ಸ್ಥಳಗಳಲ್ಲಿ ಅಂತರ್ಜಾಲ ಸಂಪರ್ಕ ಉಂಟಾಗಿ ಈಗ ಭಾರತದಲ್ಲಿ ವಿಸ್ತಾರವಾಗಿ ಬೆಳೆದು ಸುಮಾರು 100 ಮಿಲಿಯನ್ ಗಿಂತ ಹೆಚ್ಚು ಜನರು ಮೊಬೈಲ್ ಸಾಮಾಜಿಕ ಜಾಲತಾಣ ಬಳಕೆಯಲ್ಲಿ ಕ್ರಿಯಾಶೀಲ ಪಾಲುದಾರರಾಗಿದ್ದಾರೆ.
• ಸಾಮಾಜಿಕ ಜಾಲತಾಣಗಳ ಪರಿಣಾಮಗಳು :
ಸಾಮಾಜಿಕ ಜಾಲತಾಣಗಳನ್ನು ಪ್ರತಿನಿತ್ಯ ಜೀವನದಲ್ಲಿ ಬಳಸುತ್ತಿದ್ದೇವೆ. ಇದರಿಂದ ಒಳ್ಳೆಯ ಪರಿಣಾಮಗಳು ಮತ್ತು ದುಷ್ಪರಿಣಾಮಗಳು ಎರಡೂ ರೀತಿ ಪರಿಣಾಮ ಬೀರುತ್ತವೆ.
ಎ) ಸಾಮಾಜಿಕ ಜಾಲತಾಣಗಳಿಂದ ಉಂಟಾಗುವ ಉತ್ತಮ ಪರಿಣಾಮಗಳು :
1. ಮಾರಾಟ ಉತ್ತೇಜ ಚಟುವಟಿಕೆಗಳಲ್ಲಿ ಸಾಮಾಜಿಕ ಜಾಲತಾಣಗಳನ್ನು ಹೆಚ್ಚು ಬಳಸುವುದರಿಂದ ಬಹು ವೇಗದಲ್ಲಿ ಅತಿ ಸುಲಭವಾಗಿ ಜನರಿಗೆ ಹೆಚ್ಚು ಉಪಯುಕ್ತವಾಗಿ ಕಾರ್ಯನಿರ್ವಹಿಸುತ್ತದೆ. ಇ-ಆಡಳಿತ, ಇ-ವಾಣಿಜ್ಯ ಮುಂತಾದ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಆಧುನಿಕ ಯುಗದಲ್ಲಿ ಹೆಚ್ಚು ಪ್ರಗತಿ ಸಾಧಿಸಲು ತನ್ನದೇ ಆದ ಪರಿಣಾಮ ಬೀರುತ್ತಿದೆ.
2. ಸಾಮಾಜಿಕ ಜಾಲತಾಣಗಳು ಮೊಬೈಲ್‍ಗಳು ಮತ್ತು ವೆಬ್ ಆಧಾರಿತ ತಂತ್ರಜ್ಞಾನ  ಸಮುದಾಯಗಳಿಗೆ ವೇದಿಕೆಯನ್ನು ಕಲ್ಪಿಸುತ್ತವೆ. ಸಾಮಾಜಿಕ ಜಾಲತಾಣಗಳು ಆನ್‍ಲೈನ್ ಮೂಲಕ ವ್ಯಕ್ತಿಗಳು ಮತ್ತು ಗುಂಪುಗಳ ನಡುವೆ ನಿಕಟ ಸಂಪರ್ಕ ಏರ್ಪಡಿಸುತ್ತವೆ.
3. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಹೆಚ್ಚಿನವರು ಸಾಮಾಜಿಕ ಜಾಲತಾಣಗಳ ಬಳಕೆದಾರರಾಗಿದ್ದಾರೆ. ಅಮೇರಿಕಾ, ಬ್ರೆಜಿಲ್, ಬ್ರಿಟನ್, ಇಟಲಿ ಮುಂತಾದ ರಾಷ್ಟ್ರಗಳಲ್ಲಿ ಟಿ.ವಿ., ರೇಡಿಯೋಗಳಿಗಿಂತ ಹೆಚ್ಚಾಗಿ ಅಂತರ್ಜಾಲದ ಮುಖಾಂತರ ಮಾಹಿತಿ ಪಡೆದುಕೊಳ್ಳುತ್ತಾರೆ.
4. ಶೈಕ್ಷಣಿಕ ಸೇವೆಯನ್ನು ಶಿಕ್ಷಣ ಸಂಸ್ಥೆಗಳಿಗೆ ಒದಗಿಸಲು ಮತ್ತು ಮಕ್ಕಳು ತಂತ್ರಜ್ಞಾನದ ಬಗ್ಗೆ ಅರಿಯಲು ತನ್ನದೇ ಆದ ರೀತಿ ಸಾಮಾಜಿಕ ಜಾಲತಾಣಗಳು ಪರಿಣಾಮ ಉಂಟುಮಾಡಿವೆ.
5. ಸಾಮಾಜಿಕ ಜಾಲತಾಣಗಳು ಶೈಕ್ಷಣಿಕವಾಗಿ ಬಹಳಷ್ಟು ಉಪಯುಕ್ತವಾಗಿವೆ. ತಾಂತ್ರಿಕ ಮತ್ತು ಸಾಮಾಜಿಕ ಕೌಶಲ್ಯಗಳನ್ನು ಕಲಿಯಲು, ಶೈಕ್ಷಣಿಕ ಕೌಶಲ್ಯಗಳನ್ನು ರೂಢಿಸಿಕೊಳ್ಳಲು ಸಮರ್ಥ ಮಾಧ್ಯಮಗಳಾಗಿ ಸಾಮಾಜಿಕ ಜಾಲತಾಣಗಳು ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ತುಂಬಾ ಅನುಕೂಲಕಾರಿಯಾಗಿವೆ.
6. “ಡಿಜಿಟಲ್ ಇಂಡಿಯಾ” ದಂತಹ ಯೋಜನೆಯ ಮೂಲಕ ಸರಕಾರದ ಎಲ್ಲಾ ಯೋಜನೆಗಳನ್ನು ಜನರಿಗೆ ಅಂತರ್ಜಾಲದ ಮೂಲಕ ಅರಿಯಲು ಹಾಗೂ ಸರಕಾರದ ಆಡಳಿತದ ವಿವರಗಳನ್ನು ಜನರಿಗೆ ದೊರೆಯುವ ಮೂಲಕ ಸರಕಾರದ ವಿವಿಧ ಇಲಾಖೆಗಳು ಕೊಡುವ ಅಂತರ್ಜಾಲ ಮಾಹಿತಿಗಳನ್ನು ಜನರು ಕುಳಿತಲ್ಲೇ ವಿವರಗಳನ್ನು ಪಡೆಯಲು ಸಹಾಯಕವಾಗಿವೆ. ಈ ರೀತಿ ಜನರು ಮತ್ತು ಸರ್ಕಾರದ ನಡುವೆ ಉತ್ತಮ ಪರಿಣಾಮಕಾರಿ ರೀತಿಯಲ್ಲಿ ಅಂತರ್ಜಾಲ ಅಥವಾ ಸಾಮಾಜಿಕ ಜಾಲತಾಣಗಳು ಕಾರ್ಯನಿರ್ವಹಿಸುತ್ತಿವೆ.
7. ಸಾಮಾಜಿಕ ಜಾಲತಾಣಗಳಲ್ಲಿ, ನಿರಂತರ ಚರ್ಚೆ, ಗುಂಪು ಚರ್ಚೆಗಳು ನಡೆಯುವುದರಿಂದ, ಸಾರ್ವಜನಿಕ ಜೀವನದ ಸಂಗತಿಗಳ ಬಗ್ಗೆ ಚರ್ಚಿಸುವುದರಿಂದ ಜನರಿಗೆ ಸಾರ್ವಜನಿಕ ಜೀವನದ ಬಗ್ಗೆ ಅರಿವನ್ನು ಬೆಳೆಸುತ್ತವೆ. ಈ ರೀತಿಯಾಗಿ ಸಾಮಾಜಿಕ ಜಾಲತಾಣಗಳು ಸಮಾಜದಲ್ಲಿ ತನ್ನದೇ ಆದ ಉತ್ತಮ ಪರಿಣಾಮಗಳನ್ನು ಬೀರಿದ್ದು ಪ್ರಜಾಪ್ರಭುತ್ವದ ಯಶಸ್ಸಿಗೆ ಉತ್ತಮವಾದ ಕೊಡುಗೆಗಳನ್ನು ನೀಡುತ್ತಿವೆ.
* ಸಾಮಾಜಿಕ ಜಾಲತಾಣಗಳ ದುಷ್ಪರಿಣಾಮಗಳು :
ಸಾಮಾಜಿಕ ಜಾಲತಾಣಗಲನ್ನು ಜನರು ನೋಡುತ್ತಾ ಕಾಲ ಕಳೆಯುವ ಅವಧಿ ಜಾಸ್ತಿಯಾಗಿದೆ. ಇದರಿಂದ ಜನರ ಆರೋಗ್ಯದ ಮೇಲೆ ಅಷ್ಟೇ ಅಲ್ಲದೆ ಹಲವು ರೀತಿಯಲ್ಲಿ ದುಷ್ಪರಿಣಾಮಗಳು ಬೀರುತ್ತವೆ. ಸಾಮಾಜಿಕ ಜಾಲತಾಣಗಳಿಂದ ಹಲವು ರೀತಿಯಲ್ಲಿ ದುಷ್ಪರಿಣಾಮಗಳು ಉಂಟಾಗುತ್ತವೆ ಅವು ಕೆಳಗಿನಂತಿವೆ.
1. ಸಾಮಾಜಿಕ ಜಾಲತಾಣಗಳಲ್ಲಿ ಹಿಂಸೆ ಮತ್ತು ಕ್ರೌರ್ಯದ ದೃಶ್ಯಗಳು, ಹಿಂಸೆ, ಅತ್ಯಾಚಾರಗಳು, ಅನೇಕ ರೀತಿಯ ಅನೈತಿಕ ದೃಶ್ಯಗಳ ಮಾಹಿತಿ ಲಭ್ಯವಿರುವುದರಿಂದ ಬಳಕೆದಾರನ ಅಥವಾ ಪುಟ್ಟ ಮಕ್ಕಳ ಕೈಗೂ ಸಿಗುವಂತಾಗಿದ್ದರಿಂದ ಇವು ಅವರ ಮೇಲೆ ಪ್ರಭಾವ ಬೀರಿ ಸಾಮಾಜಿಕ ನೈತಿಕತೆಯ ಮಟ್ಟ ಕುಸಿಯಲು ಅಗಾಧವಾದ ರೀತಿಯಲ್ಲಿ ಪರಿಣಾಮ ಬೀರುತ್ತವೆ.
2. ಭಯೋತ್ಪಾದನೆ ರಹಸ್ಯ ಚಟುವಟಿಕೆಗಳು, ಉಗ್ರಗಾಮಿಗಳು, ಸಾಮಾಜಿಕ ಜಾಲತಾಣಗಳನ್ನು ಕೆಟ್ಟ ಉದ್ದೇಶಗಳಿಗಾಗಿ ಬಳಸುವುದರಿಂದ ದೇಶದಲ್ಲಿ ಅಶಾಂತಿ, ಗಲಭೆ, ಕೊಲೆ, ರಕ್ತಪಾತದಂತಹ ಚಟುವಟಿಕೆಗಳು ಹೆಚ್ಚಿ ಸಾಮಾಜಿಕ ನೆಮ್ಮದಿ ಕಿತ್ತುಕೊಂಡು ಸಾಮಾನ್ಯ ಮನುಷ್ಯನ ಬದುಕಿನ ಮೇಲೂ ಅಗಾಧವಾದ ರೀತಿಯಲ್ಲಿ ಪರಿಣಾಮಗಳು ಸೃಷ್ಟಿಸಲೂ ಕಾರಣವಾಗಿವೆ ಈ ಸಾಮಾಜಿಕ ಜಾಲತಾಣಗಳು.
3. ಅಂತರ್ಜಾಲ ಇಂದಿನ ಯುವಕ-ಯುವತಿಯರು ಹೆಚ್ಚು ತಲ್ಲೀನವರಾಗಿರುವುದರಿಂದ ಹೆಚ್ಚು ಸೋಮಾರಿತನ ಬೆಳೆದು ಸಮಾಜದ ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸಿವೆ.
4. ಭಾರತ ಪ್ರಭುತ್ವವು ಎದುರಿಸುತ್ತಿರುವ ಬಗೆಹರಿಸಲು ಆಸಾಧ್ಯವಾದ ದಂದ್ವವಿದು. ಸಾಮಾಜಿಕ ಜಾಲತಾಣಗಳಲ್ಲಿ ಅನವಶ್ಯಕವಾದ, ಸಮಾಜಕ್ಕೆ ಮಾರಕವಾದ ವಿಷಯದ ಬಗ್ಗೆ ವ್ಯಾಪಕವಾದ ಚರ್ಚೆಗಳು ನಡೆಯುವುದರಿಂದ ಸಾರ್ವಜನಿಕ ಜೀವನದ ಮೇಲೆ ದುಷ್ಪರಿಣಾಮ ಬೀರುತ್ತದೆ.
5. ಮಾಹಿತಿ ಸೋರಿಕೆಯಾಗುವುದು ಅಂದರೆ ಅಂತರ್ಜಾಲದ ಮುಖಾಂತರ ಗಣಕಯಂತ್ರಗಳಲ್ಲಿರುವ ಮಾಹಿತಿಯನ್ನು ಕದಿಯುವುದು ಸಹ ನಡೆಯುತ್ತಿದೆ. ಕೆಲವೊಮ್ಮೆ ಕ್ರೆಡಿಟ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯ ಮಾಹಿತಿಗಳನ್ನು ಇತರರು ಕದಿಯುವ ಅಪಾಯ ಉಂಟಾಗಿದೆ. ಈ ರೀತಿ ದುಷ್ಪರಿಣಾಮವು ಬೀರುತ್ತವೆ.
6. ವೈರಸ್ ದಾಳಿ ಉಂಟಾಗುವುದು ಅಂದರೆ ಅಂತರ್ಜಾಲದಲ್ಲಿ ನೂರಾರು ಗಣಕಯಂತ್ರಗಳು ಒಂದಕ್ಕೊಂದು ಸಂಪರ್ಕ ಹೊಂದಿರುವುದರಿಂದ ಒಂದು ಗಣಕಯಂತ್ರದಲ್ಲಿರುವ ವೈರಸ್ ಇತರ ಗಣಕಯಂತ್ರಗಳಿಗೆ ಸುಲಭವಾಗಿ ಹರಡಬಹುದಾಗಿದೆ. ಇದರಿಂದ ಕಂಪ್ಯೂಟರ್‍ಗೆ ಹಾನಿಯಾಗುವುದಲ್ಲದೆ ಮಾಹಿತಿಯೂ ನಶಿಸಬಹುದು.
ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣಗಳು ಸಾಮಾಜಿಕ ಜೀವನದಲ್ಲಿ ಒಂದಲ್ಲ ಒಂದು ರೀತಿಯ ಪರಿಣಾಮ ಬೀರುತ್ತವೆ. ಸಾಮಾನ್ಯ ಮನುಷ್ಯನ ಮೇಲೂ ಅಗಾಧವಾದ ಪರಿಣಾಮ ಬೀರುತ್ತವೆ. ಇದರ ಪರಿಣಾಮಗಳು ಒಳಿತು ಮತ್ತು ಕೆಡಕು ಎರಡೂ ಒಳಗೊಂಡಿದ್ದು ಬಳಕೆಯ ಮೇಲೆ ಅವಲಂಬನೆಯಾಗಿದೆ.ಸಾಮಾಜಿಕ ಜಾಲತಾಣಗಳ ಅವಶ್ಯಕತೆ ಇದೆ.ಇದರಿಂದ ದೇಶದ ಅಭಿವೃದ್ಧಿ ಸಾಧ್ಯ.ತಂತ್ರಜ್ಞಾನದ ಬೆಳವಣಿಗೆಯಲ್ಲಿ ಅತಿ ಗಣನೀಯ ಪರಿಣಾಮ ಬೀರುತ್ತದೆ.

LOOKING FOR KAS, PSI, KPSC, BANKING & SSC EXAM
PREPARATION IN BANGALORE ?

LOOKING FOR KAS, PSI, KPSC, BANKING & SSC EXAM PREPARATION IN BANGALORE ?

Contact Us Now