iasjnana
Essay
ಕರ್ನಾಟಕ ಪ್ರವಾಸ್ಯೋದ್ಯಮ – ಆಗಬೇಕಾಗಿರುವ ಬದಲಾವಣೆಗಳು ಏನು?
ಪ್ರಮುಖ ಐತಿಹಾಸಿಕ ತಜ್ಞ ಹೆರೆಡೋಟಸ್ರಕವರ ಪ್ರಕಾರ  “ಒಂದು ದೇಶದ ಸಂಸ್ಕೃತಿಯು ಪ್ರಚಾರವಾಗಬೇಕಾದರೆ ಪ್ರವಾಸೋದ್ಯಮ ಅಗತ್ಯ” ಎಂದು ಹೇಳಿದ್ದಾರೆ.
ದೇಶದ ಆರ್ಥಿಕತೆ ಹಾಗೂ  ಅಂತರಾಷ್ಟ್ರೀಯ ಮಟ್ಟದಲ್ಲಿ ಅಲ್ಲಿನ ಪ್ರೇಕ್ಷಣೆಯ ಕ್ಷೇತ್ರಗಳ ಗಣನೆಯೂ ಅತ್ಯಮೂಲ್ಯವಾಗಿರುತ್ತದೆ. ಹೀಗಿರುವಾಗ ಆಧುನಿಕ ಯುಗದಲ್ಲಿ ವಿಶ್ವಮಟ್ಟದಲ್ಲಿ ಪ್ರತೀ ರಾಷ್ಟ್ರವೂ ಪ್ರವಾಸೋದ್ಯಮಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿದ್ದಾರೆ. ಭಾರತವು ಸಹ ಪ್ರವಾಸೋದ್ಯಮ ಸಚಿವಾಲಯವನ್ನು ಹೊಂದಿದೆ ಹಾಗೂ ಎಲ್ಲಾ ರಾಜ್ಯಗಳೂ ಈ ಇಲಾಖೆಯನ್ನು ಹೊಂದಿವೆ. ಕರ್ನಾಟಕವು ಆರ್ಥಿಕತೆಗೆ ಪ್ರವಾಸೋದ್ಯಮದಿಂದ ಅರ್ಥಿಕಆದಾಯದ ಮೂಲಗಳಲ್ಲಿ ಒಂದಾಗಿದೆ. ಆದರೇ ಪ್ರಸ್ತುತ ದಿನಗಳಲ್ಲಿ ಇದರ ಮೂಲಸೌಕರ್ಯಗಳಲ್ಲಿ  ಅಂತಹ ಹೆಚ್ಚಗಿನ ಬೆಳವಣಿಗೆ  ಕಾಣಸಿಗುತ್ತಿಲ್ಲ. ಹಾಗೂ ಪ್ರವಾಸೋದ್ಯಮ ಇತರ ನೆರೆ ರಾಜ್ಯಗಳಾದ ಕೇರಳ,  ತಮಿಳುನಾಡು, ಆಂಧ್ರಪ್ರದೇಶಗಳಿಗೆ ಹೋಲಿಸಿದರೆ ಮೂಲಸೌಕರ್ಯಗಳಲ್ಲಿ  ಹೆಚ್ಚು ಸಮಸ್ಯೆ  ಎದುರಿಸುತ್ತಿದೆ. ಈ ಸಮಸ್ಯೆಗಳನ್ನು  ನಿವಾರಿಸಲು ಸರ್ಕಾರ ಖಾಸಗೀ ಅಸ್ತಿತ್ವಕ್ಕೂ ಸಹ ಅವಕಾಶವನ್ನು ಕಲ್ಪಿಸಿಕೊಡುತ್ತಿದೆ. ಇದಕ್ಕೆ ಅವಕಾಶ   ಕಲ್ಪಿಸಲು “ಕರ್ನಾಟಕ ಪ್ರವಾಸೋದ್ಯಮ ನೀತಿ-2015-2020” ಎಂಬ ನೀತಿಯನ್ನು ಸರ್ಕಾರ ಅನುಷ್ಠಾನಕ್ಕೆ ತಂದಿದೆ. ಇದರ ಮುಖ್ಯ ಉದ್ದೇಶ ಪ್ರವಾಸೋದ್ಯಮದಲ್ಲಿ ಖಾಸಗೀ ಅಸ್ತಿತ್ವ ಹಾಗೂ ಬಂಡವಾಳ ಹೂಡಿಕೆಯಾಗಿದೆ. ಹಾಗೂ ಸ್ಥಳೀಯ ಅಸ್ತಿತ್ವಕ್ಕೆ ಅವಕಾಶ ನೀಡುವುದಾಗಿದೆ.
ಕರ್ನಾಟಕ ಪ್ರವಾಸೋದ್ಯಮದ ಪ್ರಸ್ತುತ ವಸ್ತು ವಿಷಯದಲ್ಲಿ ಮುಖ್ಯವಾಗಿ ಐತಿಹಾಸಿಕ ಸ್ಥಳಗಳು, ಪುರಾತತ್ವ, ಪ್ರ್ರೇಕ್ಷಣೀಯ ಸ್ಥಳಗಳು, ಜಲಪಾತಗಳು. ಸ್ಮಾರಕಗಳು ಮತ್ತು ಇತರೆ ಉದ್ಯಾನವನಗಳು ಇದರ ಪಟ್ಟಿಯಲ್ಲಿ ಬರಲಿವೆ ಎಂದು ರಾಜ್ಯ ಪ್ರವಾಸೋದ್ಯಮ ಇಲಾಖೆಯು 2013 ರಲ್ಲಿ ಸ್ಪಷ್ಟಪಡಿಸಿದೆ.
26 ಮಾರ್ಚ್ 2015 ರಂದು ಬೆಂಗಳೂರಿನಲ್ಲಿ ಕರ್ನಾಟಕ ನೂತನ ಪ್ರವಾಸೋದ್ಯಮ ನೀತಿಯನ್ನು ಅನುಷ್ಠಾನಕ್ಕೆ ತರಲಾಯಿತು. ಕರ್ನಾಟಕ ಸರ್ಕಾರವು ಕೆಳಕಂಡ ಕೆಲವು ಅಂಶಗಳನ್ನು ಜಾರಿಗೆ ತಂದಿದೆ.
•ಐದು ವರ್ಷದ ಪ್ರವಾಸೋದ್ಯಮ ಬೆಳವಣಿಗೆ;
•ಪ್ರವಾಸೋದ್ಯಮದಲ್ಲಿ ಖಾಸಗೀ ಬಂಡವಾಳ ಹೂಡಿಕೆಗೆ ಅವಕಾಶ;
•ಪ್ರವಾಸೋದ್ಯಮದಲ್ಲಿ ಸ್ಥಳೀಯರಿಗೆ ಅವಕಾಶ ಕಲ್ಪಿಸುವುದು;
• ಪ್ರವಾಸೋದ್ಯಮ ಹೆಚ್ಚು ಆಕರ್ಷಣೆಗೊಳಿಸುವುದರ ಜೊತೆಗೆ ಆದಾಯವನ್ನು ಹೆಚ್ಚಿಸುವುದು;
• ಪ್ರವಾಸೋದ್ಯಮದ ಕುರಿತು ನೂತನ ಸಂಶೋಧನೆಗಳನ್ನು ಕೈಗೊಳ್ಳುವುದು.
“ಪ್ರಸ್ತುತ ಈ ನೀತಿಯು ರಾಜ್ಯ ಸರ್ಕಾರದಲ್ಲಿ ಐದು ವರ್ಷ ಕಾರ್ಯನಿರ್ವಹಿಸಲಿದೆ” ಎಂದು ಪ್ರವಾಸೋದ್ಯಮ ಕಾರ್ಯದರ್ಶಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಪ್ರವಾಸೋದ್ಯಮದಲ್ಲಿ ಆಗಬೇಕಾಗಿರುವ ಪ್ರಮುಖ ಬದಲಾವಣೆಗಳೆಂದರೆ:
• ಮೂಲ ಸೌಕರ್ಯಗಳ ಅಭಿವೃದ್ಧಿ:ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೆಚ್ಚು ಜನರ ಸಂಪರ್ಕ ಬಂದು ಹೋಗುವ ಪ್ರವೃತ್ತಿ ಇದ್ದು ಅಲ್ಲಿನ ಪರಿಸರವು ಅಧಿಕ ಮೂಲ ಸೌಕರ್ಯಗಳ ಅಭಿವೃದ್ಧಿಯಾಗುವುದು ಪ್ರಮುಖವಾಗಿರುತ್ತದೆ. ಸ್ವಚ್ಛತೆ, ಶಾಂತಿ, ಕುಡಿಯುವ ನೀರು, ಶೌಚಾಲಯ- ಈ ಎಲ್ಲಾ ಸೌಕರ್ಯಗಳು ಪ್ರಮುಖವಾಗಿ ಅಗತ್ಯ ರೂಪದಲ್ಲಿ ಅಭಿವೃದ್ಧಿಯಾಗಬೇಕು.
•ರಸ್ತೆ, ಸಂಪರ್ಕಗಳ ಸಮರ್ಪಕ ವ್ಯವಸ್ಥೆ:ಕರ್ನಾಟಕ ಪ್ರವಾಸೋದ್ಯಮವು ಮುಖ್ಯವಾಗಿ ಗಮನ ನೀಡಬೇಕಾಗಿರುವ ವಿಷಯವೇ ರಸ್ತೆ, ಸಂಪರ್ಕಗಳ ಸಮರ್ಪಕ  ವ್ಯವಸ್ಥೆಯಾಗಿದೆ. ಕಾರಣ ರಸ್ತೆ ಸಮರ್ಪಕವಾಗಿರದೇ ಇದ್ದರೆ ಜನರು ಭೇಟಿ ನೀಡಲು ಅಭಿರುಚಿ ವ್ಯಕ್ತಪಡಿಸುವುದಿಲ್ಲ. ಆದ್ದರಿಂದ ಇದರ ಅಭಿವೃದ್ಧಿಯು ಪ್ರಮುಖವಾಗಿರುತ್ತದೆ.
• ಮ್ಯೂಸಿಯಂ ಮತ್ತು ಗ್ಯಾಲರಿಯನ್ನು ಅಭಿವೃದ್ಧಿ ಪಡಿಸುವುದು:ಕರ್ನಾಟಕದಲ್ಲಿ ಮ್ಯೂಸಿಯಂ ಹಾಗೂ ಗ್ಯಾಲರಿಗಳು ನೆರೆಯ ರಾಜ್ಯಗಳಿಗಿಂತ ಕಡಿಮೆ. ಕಾರಣ ಮ್ಯೂಸಿಯಂ ನಿರ್ವಹಣೆಯಲ್ಲಿ ಸಿಬ್ಬಂದಿ ನಿರ್ವಹಣೆ, ಸ್ವಚ್ಛತೆ, ಸಮಯಪ್ರಜ್ಞೆ - ಈ ಎಲ್ಲಾ ವಿಷಯಗಳಲ್ಲೂ ಇನ್ನೂ ಬದಲಾವಣೆ ಸಾಧ್ಯವಾಗಬೇಕಾಗಿದೆ.
• ಹಸಿರು ಪ್ರವಾಸೋದ್ಯಮ ಅಥವಾ ಇಕೋ ಪ್ರವಾಸೋದ್ಯಮ:ಅರಣ್ಯ ಇಲಾಖೆಯ ಸಹಯೋಗದಲ್ಲಿ ಪ್ರವಾಸೋದ್ಯಮವು ಜಂಟಿಯಾಗಿ ಕಾರ್ಯನಿರ್ವಹಿಸಬೇಕು. ಅರಣ್ಯ ಇಲಾಖೆಯು ತನ್ನಲ್ಲಿ ಅನಗತ್ಯವಿರುವ  ಭೂಮಿಯಲ್ಲಿ ವಸತಿಗೃಹ, ಇತರೆ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶವನ್ನು  ಕಲ್ಪಿಸಬೇಕು ಹಾಗೂ ಹಸಿರು ಪ್ರವಾಸೋದ್ಯಮಕ್ಕೆ ಸಾಧ್ಯ ಮಾಡಿಕೊಡಬೇಕು ಹಾಗೂ ಈ ಪ್ರವಾಸೋದ್ಯಮವು ಪರಿಸರ ಹಾಗೂ ವಾತಾವರಣಕ್ಕೆ ಅನುಕೂಲಕರವಾಗಿರಬೇಕು. ಇದÀರಿಂದ ಪರಿಸರ ಸಮತೋಲನವು ಸೃಷ್ಠಿಯಾಗುತ್ತದೆ ಜೊತೆಯಲ್ಲಿ ಪ್ರವಾಸೋದ್ಯಮವು ಬೆಳವಣಿಗೆ ಹೊಂದುತ್ತದೆ.
• ಗ್ರಾಮೀಣ ಪ್ರವಾಸೋದ್ಯಮ ಯೋಜನೆ ಜಾರಿಗೆ ತರಬೇಕು:ಮಹಾತ್ಮ ಗಾಂಧೀಜಿಯವರು ಹೇಳಿರುವಂತೆ ಭಾರತದಲ್ಲಿ ಗ್ರಾಮಗಳೇ ಅಭಿವೃದ್ಧಿಯ ಕೇಂದ್ರಗಳಾಗಬೇಕು, ಹಾಗಿರುವಾಗ ಗ್ರಾಮೀಣ ಪ್ರವಾಸೋದ್ಯಮದ ಯೋಜನೆಜಾರಿಗೆ ಬರಬೇಕು, ಇದರನುಸಾರ ಗ್ರಾಮೀಣ ಜನರ ಜಾನಪದ ಸಾಹಿತ್ಯ, ಸಂಸ್ರøತಿ, ಕಲೆ, ಗುಡಿ ಕೈಗಾರಿಕೆಗಳಿಗೆ ಹೆಚ್ಚು ಅವಕಾಶ ಮಾಡಿಕೊಡಬೇಕು. ಇದರಿಂದ ಗ್ರಾಮೀಣ ಉದ್ಯಾನವನ, ಕೃಷಿ ಉದ್ಯಾನವನಗಳು ಸೃಷ್ಠಿ ಮಾಡಬೇಕು. ಆಗ ಪ್ರವಾಸೋದ್ಯಮದಲ್ಲಿ ಹೆಚ್ಚು ಬೆಳವಣಿಗೆ ಸಾಧ್ಯವಾಗುತ್ತದೆ. ಗ್ರಾಮೀಣ ಪ್ರದೇಶಗಳನ್ನು ಇಷ್ಟ ಪಡುವ ನಗರವಾಸಿಗಳು, ಉದ್ಯಮಿಗಳು ಬಂದು ಹೋಗುವ ಸಂಸ್ರøತಿ ಗ್ರಾಮೀಣ ಪ್ರವಾಸೋದ್ಯಮದಿಂದ ಹೆಚ್ಚುತ್ತದೆ.
• ವಿಹಾರ ನೌಕಾ ಪ್ರವಾಸೋದ್ಯಮ:ಕರ್ನಾಟಕದಲ್ಲಿ ಮಹಾರಷ್ರ್ಟಕ್ಕೆ ಹೋಲಿಸಿದರೆ ವಿಹಾರ ನೌಕಾ ಪ್ರವಾಸೋದ್ಯಮ ಪ್ರಮಾಣ ಕಡಿಮೆ ಇದೆ. ವಿಹಾರ ನೌಕಾ  ಪ್ರವಾಸೋದ್ಯಮ ಎಂದರೆ ಜಲಪಾತಗಳ ಹಿನ್ನೀರಿನಲ್ಲಿ, ನದಿ ನಡುವೆ  ಪ್ರವಾಸೋದ್ಯಮವನ್ನು ಸ್ಥಾಪಿಸುವುದು. ಇದರಿಂದ ಕರ್ನಾಟಕದಲ್ಲಿ  ಪ್ರವಾಸೋದ್ಯಮವು ಹೆಚ್ಚಾಗುತ್ತದೆ.
• ಸಾಹಸ ಪ್ರವೃತ್ತಿ ಪ್ರವಾಸೋದ್ಯಮಕ್ಕೆ ಅವಕಾಶ ಕಲ್ಪಿಸುವುದು:ಸಾಹಸ ಪ್ರವೃತ್ತಿ ಪ್ರವಾಸೋದ್ಯಮವು ಭಾರತದ ಮಟ್ಟಿಗೆ ಹೊಸ ಕಲ್ಪನೆಯಾಗಿದ್ದರೂ ಸಹ ಇದರ ಪ್ರಮುಖ ಅಗತ್ಯವಿದೆ. ಪ್ರಸ್ತುತ ದಿನಗಳಲ್ಲಿ ಯುವಕರು ಹೆಚ್ಚು ಆಕರ್ಷಣೆಗೊಳಗಾಗಬೇಕಾದರೆ ಸಾಹಸ ಪ್ರವೃತ್ತಿಯ ಭೂ ಸಾಹಸ ಕ್ರೀಡೆಗಳು, ಜಲ ಸಾಹಸ ಕ್ರೀಡೆಗಳು, ವಾಯು ಸಾಹಸ ಕ್ರೀಡೆಗಳಂತಹ ಪ್ರವಾಸೋದ್ಯಮದ ಅಗತ್ಯವಿದೆ.
• ಮನೋರಂಜನೆ ಉದ್ಯಾನವನಗಳ ಸ್ಥಾಪನೆ:ಮಹಾರಾಷ್ರ್ಟದಲ್ಲಿ ಈ ರೀತಿಯ ಮನೋರಂಜನೆ ಉದ್ಯಾನವನಗಳ ಸ್ಥಾಪನೆಯನ್ನು ಪೂನ, ಮುಂಬೈನಲ್ಲಿ ಸ್ಥಾಪಿಸಲಾಗಿದ್ದು ಇದು ಪ್ರವಾಸೋದ್ಯಮದ ಆದಾಯದ ಮೂಲಕ್ಕೆ ಸಹಕಾರಿಯಾಗಿದೆ. ಹೀಗಿರುವಾಗ ಕರ್ನಾಟಕದಲ್ಲಿಯೂ ಸಹ ಮನೋರಂಜನಾ ಉದ್ಯಾನವನಗಳ ಸ್ಥಾಪನೆಗೆ ಸರ್ಕಾರವು ಪ್ರಮುಖ ಯೋಜನೆಗಳನ್ನು ಕಲ್ಪಿಸಬೇಕು.
• ಯಾತ್ರಿನಿವಾಸ್ ಕಲ್ಪಿತ ಯೋಜನೆ ಸ್ಥಾಪಿಸುವುದು:ಯಾತ್ರಿನಿವಾಸ್ ಅಂದರೆ ಅಗತ್ಯ ರಾಷ್ಟ್ರೀಯ ರಾಜ್ಯ ಹೆದ್ದಾರಿಗಳ ಹಾಗೂ ಪ್ರವಾಸೋದ್ಯಮ ಸ್ಥಳಗಳು 10 ಕಿಲೋ ಅಂತರದಲ್ಲಿ ಕರ್ನಾಟಕ ಸರ್ಕಾರವು ಹೊಸ ಹಾಗೂ ನೂತನ ಎಲ್ಲಾ ರೀತಿಯ ಪ್ರಮುಖವಾದಂತಹ ಯಾತ್ರಿನಿವಾಸ ಸಂಯೋಜನೆಯನ್ನು ಜಾರಿಗೆ ತರಬೇಕು. ಅಗತ್ಯ ಯಾತ್ರಿನಿವಾಸಗಳು ಕಲ್ಪಿಸುವುದರಿಂದ ಪ್ರವಾಸೋದ್ಯಮಲ್ಲಿ ಹೆಚ್ಚು ಬೆಳವಣಿಗೆ ಹೊಂದಲಿದೆ. 
• ಪ್ರವಾಸಿ ಆರೋಗ್ಯ ಕೇಂದ್ರಗಳ ಸ್ಥಾಪನೆ:ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಅಗತ್ಯ ಪ್ರಾಥಮಿಕ ಪ್ರವಾಸಿ ಆರೋಗ್ಯ ಕೇಂದ್ರಗಳ ಸ್ಥಾಪನೆಗೆ ಸರ್ಕಾರವು ಹೆಚ್ಚು ಅವಕಾಶವನ್ನು ಕಲ್ಪಿಸಬೇಕಾಗಿದೆ.
•ಪ್ರವಾಸಿ ಸಮ್ಮೇಳನಗಳು ಯುವ ಮೇಳಗಳನ್ನು, ಕಾರ್ಯಗಾರಗಳನ್ನು, ಸಂಶೋಧನೆಗಳನ್ನು ಸರ್ಕಾರವು ಜನರ ಮಟ್ಟಿಗೆ ಆಕರ್ಷಕ ರೀತಿಯಲ್ಲಿ ಹಮ್ಮಿಕೊಳ್ಳಬೇಕು.
•ಮಾಹಿತಿ ಅಂತರ್ಜಾಲ, ಜಂಗಮ ವಾಣಿಯ ಬಳಸುವಿಕೆ, ಪ್ರತ್ಯೇಕ ಪ್ರವಾಸೋದ್ಯಮ ಮಾಹಿತಿ ಕೇಂದ್ರಗಳನ್ನು ರಾಜ್ಯಮಟ್ಟದಲ್ಲಿ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಸ್ಥಾಪಿಸಬೇಕು.
     ಭಾರತವು ರಾಷ್ಟ್ರ ಪ್ರವಾಸೋದ್ಯಮಕ್ಕೆ ಅವಕಾಶವನ್ನು ಕಲ್ಪಿಸುವುದರ ಜೊತೆಗೆ, ರಾಜ್ಯಗಳ ಪ್ರವಾಸೋದ್ಯಮಕ್ಕೂ ಅವಕಾಶ ಕಲ್ಪಿಸಬೇಕು. ಹಾಗೂ ಕರ್ನಾಟಕದಲ್ಲಿ ಪ್ರಸ್ತುತ ಉತ್ತಮ ರೀತಿಯ ಕಾರ್ಯಕ್ರಮಗಳು ಪ್ರವಾಸೋದ್ಯಮ ಕುರಿತಂತೆ ಕೈಗೊಂಡಿದ್ದರೂ ಇನ್ನೂ ಅಗತ್ಯ ಕ್ರಮ ಅನುಕೂಲಗಳು ಸಾಧ್ಯವಾಗಬೇಕು ಹಾಗೂ ಇದರಿಂದ ಆರ್ಥಿಕ ಆದಾಯವು ಸಹ ಪ್ರವಾಸೋದ್ಯಮದಿಂದ ಸಾಧ್ಯವಾಗುತ್ತದೆ. ಇದರಿಂದ “ಒಂದು ರಾಜ್ಯ ಹಲವು ಜಗತ್ತು” ಎಂಬ ವಾಕ್ಯದ ಪೂರ್ಣಾಥವನ್ನು “ಬಂಗಾರದ ರಥ” ದಲ್ಲಿ  ಕೊಂಡೊಯ್ಯಲು ಸಾಧ್ಯವಾಗಿಸುವುದು ನಿಶ್ಚಿತ ಮತ್ತು ಸತ್ಯ.

 

LOOKING FOR KAS, PSI, KPSC, BANKING & SSC EXAM
PREPARATION IN BANGALORE ?

LOOKING FOR KAS, PSI, KPSC, BANKING & SSC EXAM PREPARATION IN BANGALORE ?

Contact Us Now