iasjnana
Essay
ಕೃಷಿಯಲ್ಲಿ ಸ್ತ್ರೀಕರಣ – Feminisation of Agriculture

ಕೃಷಿಯಲ್ಲಿ ಸ್ತ್ರೀಕರಣ

“ಆಡು ಮುಟ್ಟದ ಸೊಪ್ಪಿಲ್ಲ, ಬಸವಣ್ಣ ಬರೆಯದ ಸಾಹಿತ್ಯವಿಲ್ಲ”, ಎಂಬ ನಾಣ್ಣುಡಿಗೆ ಮತ್ತೊಂದು ಸಾಲು ಸೇರಿಸಿ ‘ಮಹಿಳೆ ಹೆಜ್ಜೆ ಇಡದ ಕ್ಷೇತ್ರವೇ ಇಲ್ಲ’ ಎನ್ನಬಹುದು.

ಒಂದು ಪಿತೃಪ್ರಾಧಾನ ಸಾಮಾಜಿಕ ವ್ಯವಸ್ಥೆಯು ಮಹಿಳೆಯ ಕೃಷಿ ಶ್ರಮವನ್ನು ಪಡೆದುಕೊಳ್ಳುತ್ತಾರಾದರೂ, ಆಕೆಗೆ ರೈತನ ಸ್ಥಾನಮಾನ ನೀಡುವುದಿಲ್ಲ. ಕೃಷಿ ಯಾವತ್ತು ಕೇವಲ ಒಬ್ಬ ಪುರುಷ ಕೆಲಸ, ದುಡಿತವಾಗಿರಲಿಲ್ಲವಾದ್ದರಿಂದ ರೈತ ಮಹಿಳೆಯರ,ಮಹಿಳಾ ಕೃಷಿಕರ ಹಕ್ಕುಳಿಗೆ ಸೂಕ್ತ ಮನ್ನಣೆ ದೊರಕಬೇಕಾಗುತ್ತದೆ.
ವಿಶ್ವದಾದ್ಯಂತ ಕೃಷಿಗೆ ಮಹಿಳೆಯರ ಕೊಡುಗೆ ಅನನ್ಯ ವಿಶೇಷ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ಪ್ರಕಾರ ಪುರುಷರಿಗೆ ಸಿಗುವ ಉತ್ಪಾದನಾ ಸಂಪನ್ಮೂಲಗಳು ಮಹಿಳೆಯರಿಗೂ ಅದೇ ಪ್ರಮಾಣದಲ್ಲಿ ಸಿಕ್ಕಿದರೆ ಅವರು ತಮ್ಮ ಹೊಲಗಳಲ್ಲಿ ಶೇ 20-30 ರಷ್ಟು ಇಳುವರಿ ಹೆಚ್ಚಿಸಬಲ್ಲರು.
ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಕೃಷಿ ಕಾರ್ಮಿಕ ಪಡೆಯಲ್ಲಿ ಮಹಿಳೆಯರು ಶೇ.43 ರಷ್ಟು ಇದ್ದು, ಜಗತ್ತಿನ ಅಂದಾಜು 600 ಮಿಲಿಯನ್ ಬಡವರು ನಿರ್ವಹಿಸುತ್ತಿರುವ ಪಶುಸಂಗೋಪನೆಯಲ್ಲಿ ಅಂದಾಜು ಶೇ.66 ರಷ್ಟು ಮಜಹಿಳೆಯರು ಇದ್ದಾರೆ. ಈ ದೇಶಗಳಲ್ಲಿ ಆರ್ಥಿಕವಾಗಿ ಚಟುವಟಿಕೆಯುಳ್ಳ ಮಹಿಳೆಯರಲ್ಲಿ ಶೇ.79 ರಷ್ಟು ಜನ ಕೃಷಿಯ ಮೇಲೆ ಅವಂಬಿತವಾಗಿದ್ದು, ಅವರ ಮೂಲಭೂತ ಅವಶ್ಯಕತೆಗಳಿಗೆ ಕೃಷಿಯೇ ಜೀವನಾಧಾರ.
ಅಸಂಘಟಿತ ವಲಯದಲ್ಲಿ ಮಹಿಳಾ ಕಾರ್ಮಿಕರೆ ಹೆಚ್ಚು. ಅದರಲ್ಲೂ ಕೃಷಿ ವಲಯದಲ್ಲಿ ಅಸಂಘಟಿರೇ ಹೆಚ್ಚು. ಗ್ರಾಮೀಣ ಮಹಿಳೆಯರು ಪುರುಷರಿಗಿಂತ ಹೆಚ್ಚು ಸಮಯ ವೇತನರಹಿತ, ಹೆಚ್ಚು ಶ್ರಮದಾಯಕ ಮತ್ತು ಕಡಿಮೆ ವೇತನ ದೊರೆಯುವ ಕೆಲಸಗಳಲ್ಲಿ ನಿರತರಾಗಿದ್ದಾರೆ.
ಸಮೀಕ್ಷೆಯ ಪ್ರಕಾರ ಕಳೆದ ಒಂದು ದಶಕದಲ್ಲಿ ಕೃಷಿಯೇತರ ಚಟುವಟಿಕೆಗಳಲ್ಲಿ ಮಹಿಳೆ ಪಾಲ್ಗೊಂಡು ಮನೆಯ ಆಧಾಯಕ್ಕೆ ಮತ್ತು ಆಹಾರ ಭದ್ರತೆಗೆ ತಮ್ಮದೇ ಆದ ಕೊಡುಗೆಯನ್ನು ಆರ್ಥಿಕ ಚಟುವಟುಕೆ ಮೂಲಕ ನೀಡಿದ್ದಾರೆ.
ಮಹಿಳೆಯರ ಕೃಷಿ ಸಂಬಂಧಿತ ಚಟುವಟಿಕೆಗಳು ಗದ್ದೆ ಉಳುಮೆ ಮಾಡುವ, ಬಿತ್ತನೆ ಮಾಡುವ, ಕೊಯ್ಲು ಬಡಿಯುವಂತಹ ಕಠಿಣ ಕೆಲಸಗಳನ್ನು ಮಾಡಬೇಕಾಗುತ್ತದೆ.
ಒಂದು ಅಧ್ಯಯನದ ಪ್ರಕಾರ ಒಂದು ಹೆಕ್ಟರ್ ಪ್ರದೇಶದಲ್ಲಿ ಒಂದು ಜೋಡಿ ಎತ್ತುಗಳು 1064 ಘಂಟೆಗಳಷ್ಟು ಕೆಲಸ ಮಾಡಿದರೆ,ಒಬ್ಬ ಕೃಷಿಕ ಒಂದು ವರ್ಷಕ್ಕೆ 1212 ಘಂಟೆಗಳನ್ನು ಮತ್ತು ಒಬ್ಬ ಕೃಷಿಕ ಮಹಿಳೆ 4485 ಘಂಟೆಗಳನ್ನು ವ್ಯಯಿಸುತ್ತಾಳೆ. ವಿವಿಧ ಕೃಷಿ ಚಟುವಟಿಕೆಗಳಲ್ಲಿ ತೊಡಗಿದಾಗ ದೇಹದ ಭಂಗಿಗಳನ್ನು ಗಮನಿಸಿದಾಗ ದೇಹದ ಭಾಗಗಳಾಗಿ ಮೊಣಕೈ, ಕುತ್ತಿಗೆ, ಸೊಂಟ, 450 ಕೋನಕ್ಕಿಂತಲೂ ಹೆಚ್ಚು ಬಾಗಿರುತ್ತದೆ. ಸತತವಾಗಿ 8 ತಾಸುಗಳ ಕಾಲ ತುದಿಗಾಲ ಮೇಲೆ ಕೂಡುವಿಕೆಯಿಂದ ಬೆನ್ನು ಹುರಿ, ಸವೇತ, ಬಗ್ಗಿ ಸಸಿ ನಾಟಿ ಮಾಡುವಾಗ ಪ್ರತಿದಿನಕ್ಕೆ 2000 ಸಲಕ್ಕಿಂತಲೂ ಹೆಚ್ಚು ಸಲ ಸಸಿಯನ್ನು ಕೆಸರು ಗದ್ದೆಯಲ್ಲಿ ಮಾಡುವ ಪದೇ ಪದೇ ಕೆಲಸದಿಂದ ದೇಹದ ಅವಯವಗಳ ಸವೆತ ಉಂಟಾಗುತ್ತದೆ. ಇವೆಲ್ಲವುಗಳ ಪರಿಣಾಮವಾಗಿ ದೈಹಿಕ, ಮೂಳೆಸಂಬಂಧಿತ ತೊಂದರೆಗಳು ಕಂಡುಬರುವುದರ ಜೊತೆಗೆ ಮಕ್ಕಳ ಪಾಲನೆಯಲ್ಲಿ ಸ್ತ್ರೀ ಪಾಲುದಾರಿಕೆ ಸಮಯ ಕುಂಠಿತವಾಗುತ್ತದೆ.
ಸ್ಥಳೀಯ ಮಾರುಕಟ್ಟೆಗಳಲ್ಲಿ ಮಹಿಳೆಯರಿಗೆ ತಾರತಮ್ಯ ಮಾಡಲಾಗುತ್ತದೆ.ರೈತರ ಆತ್ಮಹತ್ಯೆಗಳು 2014-15 ರ ನಡುವೆ ಶೇ 42 ರಷ್ಟು ಏರಿಕೆಯಾಗಿದೆ. 2014 ರಲ್ಲಿ ಆತ್ಮಹತ್ಯೆ ಮಾಡಿಕೊಂಡ 8017 ಮಂದಿ ರೈತರಲ್ಲಿ 441 ಮಂದಿ ರೈತ ಮಹಿಳೆಯರು ಮತ್ತು ಮಹಿಳಾ ಬೇಸಾಯಗಾರರು. ಸಮಾಜದ ಅಂಚಿನಲ್ಲಿರುವ ಮಹಿಳೆಯರ ಸಬಲೀಕರಣವಾಗದೆ ಭಾರತದಲ್ಲಿ ಮಹಿಳಾ ಸಬಲೀಕರಣ ಪೊರ್ಣಗೊಳ್ಳುವುದಿಲ್ಲ. ಪುರುಷರ ನಗರ ವಲಸೆಯು ಕೃಷಿಯಲ್ಲಿ ಮಹಿಳೆಯ ಪಾತ್ರವನ್ನು ಪುನರ್ ವ್ಯಖ್ಯಾನಿಸಿದೆ.
ಸುಧಾರಿತ ಕೃಷಿಪದ್ದತಿಗಳು ಹಾಗೂ ಮಾರುಕಟ್ಟೆಯ ಹೊಸ ಸಂಪರ್ಕ ದಾರಿಗಳ ಕುರಿತು ರೈತ ಮಹಿಳೆಯರಿಗೆ ನೇರ ದಾರಿ ಲಭ್ಯವಾಗಬೇಕು. ದಲ್ಲಾಳಿಗಳ ಕಾಟ ಕೊನೆಗೊಳ್ಳಬೇಕು.
ಕೃಷಿಕ ಮಹಿಳೆಯರಿಗೆ ತರಬೇತಿ ನೀಡುವುದು ಅತ್ಯಂತ ಅವಶ್ಯಕ ಹಾಗೂ ಅಷ್ಟೇ ಮಹತ್ವವಾದದ್ದು. ಏಕೆಂದರೆ ಇಂತಹ ತರಬೇತಿಗಳು ಅವರ ಕೌಶಲ್ಯಗಳನ್ನು ಹೆಚ್ಚಿಸಿ ಅವರೂ ಕೂಡ ರಾಷ್ಟ್ರ ಅಭಿವೃದ್ದಿಯಲ್ಲಿ ಸಮಾನ ಪಾಲುದಾರರನ್ನಾಗಿ ಮಾಡುವಂತೆ ಸಹಾಯ ಮಡುತ್ತದೆ. ಈ ಕಾರಣಕ್ಕಾಗಿ ಭಾರತೀಯ ಕೃಷಿ ಸಂಶೋಧನ ಸಂಸ್ಥೆಯು ಗ್ರಾಮೀಣ ಮಹಿಳೆಯರಿಗೆ ಅವರ ಅವಶ್ಯಕತೆಗನುಸಾರ ತರಬೇತಿ ಸೌಲಭ್ಯಗಳನ್ನು ಒದಗಿಸುವತ್ತ ಗಮನ ಹರಿಸಿದೆ. ಈ ತರಬೇತಿಗಳು ರಾಜ್ಯ ಕೃಷಿ ವಿಶ್ವವಿದ್ಯಾಲಯಗಳ ಅಧೀನದಲ್ಲಿರುವ ಕೃಷಿ ವಿಜ್ಞಾನ ಕೇಂದ್ರಗಳು ಸಮೂಹದ ಅವಶ್ಯಕತೆಗಳಿಗನುಸಾರ ತರಬೇತಿಗಳನ್ನು ಆಯೋಜಿಸುತ್ತದೆ.
ಕೃಷಿ ನಿರ್ವಹಣಾ ಚಟುವಟಿಕೆಗಳು ಮನೆಯ ಅಭಿವೃದ್ಧಿ ಮತ್ತು ಗೃಹ ಸಂಬಂದಿ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ನೀಡುವುದು ಹಾಗೂ ಹೊಸದನ್ನು ಕಂಡುಹಿಡಿಯುವಂತಹ ಪ್ರವೃತ್ತಿಯನ್ನು ಬೆಳೆಸುವುದು. ಈ ತರಬೇತಿ ಕಾರ್ಯಕ್ರಮಗಳ ಪ್ರಮುಖ ಉದ್ದೇಶ. ಕೃಷಿಚಟುವಟಿಕೆಗಲಲ್ಲಿ ಮಹಿಳೆಯರು ಎಲೆಮರೆಯ ಕಾಯಿಯಂತೆ ಕರ್ತವ್ಯ ನಿರ್ವಹಿಸಿದರೂ ಕೂಡ ಕೃಷಿ ಕ್ಷೇತ್ರಕ್ಕೆ ಅವರ ಕೊಡುಗೆ ಅಗಾದವಾದದ್ದು.

LOOKING FOR KAS, PSI, KPSC, BANKING & SSC EXAM
PREPARATION IN BANGALORE ?

LOOKING FOR KAS, PSI, KPSC, BANKING & SSC EXAM PREPARATION IN BANGALORE ?

Contact Us Now